×
Ad

ಬೆಂಗಳೂರು | ಅಡುಗೆ ಮಾಡುವ ವಿಚಾರಕ್ಕೆ ಗಲಾಟೆ; ಸೆಕ್ಯುರಿಟಿ ಗಾರ್ಡ್ ಹತ್ಯೆ

Update: 2025-06-23 21:15 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಹತ್ಯೆಗೈದಿದ್ದ ಆರೋಪದಡಿ ಓರ್ವನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೇಪಾಳ ಮೂಲದ ಝರಿಲಾಲ್ (70) ಎಂಬಾತನನ್ನು ಹತ್ಯೆಗೈದಿದ್ದ ಆರೋಪದಡಿ ಮಹೇಂದ್ರ (28) ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೇಪಾಳ ಮೂಲದ ಝರಿಲಾಲ್ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡು ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ. ಝರಿಲಾಲ್‍ನೊಂದಿಗೆ ಆತನ ಪರಿಚಿತ, ಮಹೇಂದ್ರ ಸಹ ವಾಸವಿದ್ದು, ಜೂ.22ರಂದು ಅಡುಗೆ ಮಾಡುವ ವಿಚಾರಕ್ಕೆ ಝರಿಲಾಲ್‍ನೊಂದಿಗೆ ಗಲಾಟೆ ಮಾಡಿಕೊಂಡಿದ್ದ.

ಅದೇ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಾಗ ಚಪಾತಿ ಲಟ್ಟಿಸುವ ಪ್ಯಾನ್‍ನಿಂದ ಝರಿಲಾಲ್‍ನ ತಲೆಗೆ ಹೊಡೆದು ಮಹೇಂದ್ರ ಹತ್ಯೆಗೈದಿದ್ದ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News