×
Ad

ಬೆಂಗಳೂರು | ನಿವೃತ್ತ ಬ್ಯಾಂಕ್ ಉದ್ಯೋಗಿಗೆ ವಂಚನೆ ಆರೋಪ : ಹೆಡ್ ಕಾನ್‍ಸ್ಟೇಬಲ್ ಸೇರಿ ನಾಲ್ವರ ಬಂಧನ

Update: 2025-05-31 20:02 IST

ಸಾಂದರ್ಭಿಕ ಚಿತ್ರ | PC : freepik.com

ಬೆಂಗಳೂರು : ಆರ್‌ಬಿಐನಿಂದ ತಿರಸ್ಕರಿಸಲಾದ ಕರೆನ್ಸಿ ನೋಟುಗಳನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಭರವಸೆ ನೀಡಿ ನಿವೃತ್ತ ಬ್ಯಾಂಕ್ ಉದ್ಯೋಗಿಗೆ 15 ಲಕ್ಷ ರೂ. ವಂಚಿಸಿದ ಆರೋಪದಡಿ ಹೆಡ್ ಕಾನ್‍ಸ್ಟೇಬಲ್ ಸೇರಿದಂತೆ ನಾಲ್ವರನ್ನು ಇಲ್ಲಿನ ಪೀಣ್ಯ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ನಿವೃತ್ತ ಬ್ಯಾಂಕ್ ಉದ್ಯೋಗಿ ರಾಧಾ ಕೃಷ್ಣನಾಯಕ್ ಎಂಬುವರು ನೀಡಿದ ದೂರಿನನ್ವಯ ಪ್ರಮುಖ ಆರೋಪಿಯಾದ ಹಿರಿಯೂರು ಪೊಲೀಸ್ ಠಾಣೆಯ ಹೆಡ್ ಕಾನ್‍ಸ್ಟೇಬಲ್ ನಾಗರಾಜ್ ಹಾಗೂ ಆತನ ಸಹಚರರಾದ ಕಿರಣ್ ಕುಮಾರ್, ಗಜೇಂದ್ರ ಮತ್ತು ಪ್ರಭು ಎಂಬುವರನ್ನು ಬಂಧಿಸಲಾಗಿದೆ ಎಂದು ಪೀಣ್ಯ ಠಾಣಾ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳೆಲ್ಲ ಚಿತ್ರದುರ್ಗ ಮೂಲದ ನಿವಾಸಿಗಳು ಎಂದು ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News