ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ | ಕಮಲ್ ಅಹ್ಮದ್ ಸಹಿತ ಆರು ಮಂದಿಗೆ ಗೌರವ ಪ್ರಶಸ್ತಿ
ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ನೀಡುವ 2022-23 ಮತ್ತು 2023-24ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು ಹಾಗೂ 2021-22ನೇ ಸಾಲಿನ ವರ್ಣಶ್ರೀ ಪುರಸ್ಕಾರ ಶುಕ್ರವಾರದಂದು ಪ್ರಕಟವಾಗಿದ್ದು, ಗದಗದ ಕಮಲ್ ಅಹ್ಮದ್ ಸಹಿತ ಆರು ಮಂದಿ ಗೌರವ ಪ್ರಶಸ್ತಿಗೆ, ಮಂಗಳೂರಿನ ಸಯ್ಯದ್ ಅಸೀಫ್ ಆಲಿ ಸಹಿತ 20 ಮಂದಿ ವರ್ಣಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
2022-23ನೇ ಸಾಲಿನ ಗೌರವ ಪ್ರಶಸ್ತಿಗೆ ಗದಗದ ಕಮಲ್ ಅಹ್ಮದ್, ತುಮಕೂರಿನ ನಿರ್ಮಲಾ ಕುಮಾರಿ, ಬಿ.ಪಿ.ಕಾರ್ತಿಕ್ ಮತ್ತು 2023-24ನೇ ಸಾಲಿನ ಗೌರವ ಪ್ರಶಸ್ತಿಗೆ ಯಾದಗಿರಿಯ ನಿಜಲಿಂಗಪ್ಪ ಹಾಲ್ವಿ, ಹುಬ್ಬಳಿಯ ವಿಠಲ ರೆಡ್ಡಿ ಚುಳಕಿ, ಕಲಬುರಗಿಯ ಬಾಬೂರಾವ್ ಎಚ್. ಆಯ್ಕೆಯಾಗಿದ್ದಾರೆ.
2021-22ನೇ ಸಾಲಿನ ವರ್ಣಶ್ರೀ ಪುರಸ್ಕಾರಕ್ಕೆ ಮಂಗಳೂರಿನ ವೀಣಾ ಶ್ರೀನಿವಾಸನ್, ಪರಮೇಶ ಜೋಳದ, ಪಿ.ಎ.ಬಿ. ಈಶ್ವರ, ಕುಡಲಯ್ಯಾ ಹಿರೇಮಠ, ಅಶೋಕ ಕಲ್ಲಶೆಟ್ಟಿ, ನಂದಬಸಪ್ಪ ವಾಡೆ, ಕೆ.ಜಿ. ಲಿಂಗದೇವರು, ಮಹೇಶ ಬಿ., ಶಕುಂತಲಾ ವರ್ಣೀಕರ, ಮಂಜುನಾಥ ಜಿ., ಆಯ್ಕೆಯಾಗಿದ್ದಾರೆ.
2022-23ನೇ ಸಾಲಿನ ವರ್ಣಶ್ರೀ ಪುರಸ್ಕಾರಕ್ಕೆ ಮಂಗಳೂರಿನ ಸಯ್ಯದ್ ಅಸೀಫ್ ಆಲಿ, ಶಿರಸಿಯ ಪ್ರಕಾಶ್ ನಾಯಕ್, ಬಸವರಾಜ ಸಿ ಕುತ್ನಿ, ಜಗದೀಶ್ ಕಾಂಬ್ಲೆ, ಜಯದೇವಣ್ಣ ಟಿ., ಶೈಲ ದೊತ್ರೆ, ಮಹದೇವ ಸ್ವಾಮಿ ಸಿ., ಮೀನಾಕ್ಷಿ ಸದಲಗಿ, ರವೀಶ್ ಕೆ.ಎಂ., ಎಫ್.ವಿ. ಚಿಕ್ಕಮಠ ಆಯ್ಕೆಯಾಗಿದ್ದಾರೆ.
51-52ನೇ ವಾರ್ಷಿಕ ಕಲಾ ಬಹುಮಾನಕ್ಕೆ 20 ಕಲಾವಿದರ ಕಲಾಕೃತಿಗಳು ಆಯ್ಕೆಯಾಗಿವೆ. 51ನೇ ವಾರ್ಷಿಕ ಕಲಾ ಬಹುಮಾನಕ್ಕೆ ಶಿವಪ್ರಸಾದ, ಭಾನು ಪ್ರಕಾಶ್ ಬಿ.ಎಲ್., ರಾಜೇಂದ್ರ ಕೇದಿಗೆ, ರೋಷ್ ರವೀಂದ್ರನ್, ವರ್ಣಂ ನಾರಾಯಣ, ಅಮೋಘರಾಜ್ ಡಿ. ಬಾಲಿ, ಗಿರೀಶ್ ಬಿ. ಕುಲಕರ್ಣಿ, ನಾಗರಾಜು ಪಿ., ಹಣಮಂತ ಮಲ್ಕಾಪುರೆ, ಕೃಷ್ಣಾಚಾರಿ ಅವರ ಕಲಾಕೃತಿಗಳು ಆಯ್ಕೆಯಾಗಿವೆ.
52ನೇ ವಾರ್ಷಿಕ ಕಲಾ ಬಹುಮಾನಕ್ಕೆ ಡಾ. ರೆಹಮಾನ್ ಪಟೇಲ್, ಪ್ರಶಾಂತ ಕೆ., ಎಸ್. ಅರುಳ್ ದೇವನ್, ಬ್ಪಿನೆಲ್ ಮರಿಯಾ, ಗೌತಮಿ ಎಂ., ರಮೇಶ್ ಚವ್ವಾಣ, ಸಂತೋಷ ಪತ್ತಾರ, ಚೈತ್ರ ಎನ್., ಶಿವರಾಮು, ದಯಾನಂದ ಎನ್. ಅವರ ಕಲಾಕೃತಿಗಳು ಆಯ್ಕೆಯಾಗಿವೆ.
ಚಿತ್ರಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಪ್ರಶಸ್ತಿಯು 50 ಸಾವಿರ ರೂ.ಗಳ ನಗದನ್ನು ಹೊಂದಿದೆ. ವರ್ಣಶ್ರೀ ಪುರಸ್ಕಾರವು 25 ಸಾವಿರ ರೂ. ಹಾಗೂ ವಾರ್ಷಿಕ ಕಲಾ ಬಹುಮಾನವು 25 ಸಾವಿರ ರೂ. ನಗದನ್ನು ಹೊಂದಿದೆ.