ಡಾ.ಸುಷ್ಮಾ ಶಂಕರ್‌ಗೆ ʼಎಸ್.ಎಲ್.ಭೈರಪ್ಪ ಸಾಹಿತ್ಯ ರಾಜ್ಯ ಪ್ರಶಸ್ತಿʼ ಪ್ರದಾನ
Update: 2025-03-02 15:33 IST
ಬೆಂಗಳೂರು: ಅನ್ವೇಷಣೆ ಸಾಂಸ್ಕೃತಿಕ ಅಕಾಡಮಿಯ ʼಎಸ್.ಎಲ್.ಭೈರಪ್ಪ ಸಾಹಿತ್ಯ ರಾಜ್ಯ ಪ್ರಶಸ್ತಿʼಯನ್ನು ಡಾ.ಸುಷ್ಮಾ ಶಂಕರ್ ಅವರಿಗೆ ಪ್ರದಾನ ಮಾಡಲಾಯಿತು.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ದೊಡ್ಡರಂಗೇಗೌಡರು ಪ್ರಶಸ್ತಿ ಪ್ರದಾನ ಮಾಡಿದರು.
ಅಕಾಡಮಿಯ ಸಂಸ್ಥಾಪಕ ಅಧ್ಯಕ್ಷ ಭದ್ರಾವತಿ ರಾಮಾಚಾರಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕುಂ.ವೀರಭದ್ರಪ್ಪ, ಚಿತ್ರನಟ ಕೆ.ಸುಚೇಂದ್ರ ಪ್ರಸಾದ್, ಕಾದಂಬರಿಕಾರ ಕೌಂಟಿನ್ಯ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಕೆ.ಶ್ರೀಧರ್, ಲೇಖಕಿ ಹಾಗೂ ಪತ್ರಕರ್ತೆ ಗೀತಾ ಸುನೀಲ್ ಕಶ್ಯಪ ಮೊದಲಾದವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.