×
Ad

ಬೆಂಗಳೂರು | ಮಹಿಳೆಗೆ ಅತ್ಯಾಚಾರ ಬೆದರಿಕೆ ಪ್ರಕರಣ : ಓರ್ವ ಆರೋಪಿ ಸೆರೆ

Update: 2024-07-11 21:23 IST
ಸಾಂದರ್ಭಿಕ ಚಿತ್ರ (PC : Meta AI)

ಬೆಂಗಳೂರು : ಮಹಿಳೆಗೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಒಡ್ಡಿದ ಪ್ರಕರಣದಡಿ ಓರ್ವ ಆರೋಪಿಯನ್ನು ಇಲ್ಲಿನ ಕಾಡುಗೋಡಿ ಪೊಲೀಸರು ಬಂಧಿಸಿದ್ದು, ಮತ್ತಿಬ್ಬರಿಗೆ ಶೋಧ ನಡೆಸಿರುವುದಾಗಿ ತಿಳಿಸಿದ್ದಾರೆ.

ಬಂಧಿತನನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಈತ ಸ್ನೇಹಿತರ ಜೊತೆಗೂಡಿ ಪರಿಚಯವಿದ್ದ ಮಹಿಳೆಯ ಖಾಸಗಿ ಫೊಟೋ ಇಟ್ಟುಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಅತ್ಯಾಚಾರ ಮಾಡಿ ರೈಲ್ವೇ ಟ್ರ್ಯಾಕ್‍ಗೆ ಎಸೆಯುವುದಾಗಿ ಬೆದರಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಗೆ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಶ್ರೀನಿವಾಸ್‍ನನ್ನು ಬಂಧಿಸಲಾಗಿದ್ದು, ಮತ್ತಿಬ್ಬರಿಗೆ ಹುಡುಕಾಟ ನಡೆಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಶ್ರೀನಿವಾಸ್ ಎಂಬಾತ ಈ ಹಿಂದೆ ಕೆಆರ್‌ ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಅಲ್ಲದೆ, ಈತನ ವಿರುದ್ಧ ಮಾಲೂರು, ಮಹದೇವಪುರ, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News