×
Ad

ಬೆಂಗಳೂರು | ಮೇಕೆ ಮೇಯಿಸುತ್ತಿದ್ದಾಗ ರೈಲಿಗೆ ಸಿಲುಕಿ ದಂಪತಿ ಮೃತ್ಯು

Update: 2024-07-13 19:54 IST
ಸಾಂದರ್ಭಿಕ ಚಿತ್ರ (PC: Meta AI)

ಬೆಂಗಳೂರು : ರೈಲ್ವೆ ಹಳಿ ಬಳಿ ಮೇಕೆ ಮೇಯಿಸುತ್ತಿದ್ದಾಗ ರೈಲು ಬರುತ್ತಿರುವುದು ಗಮನಿಸದೇ ಹಳಿ ಮೇಲೆ ನಿಂತಿದ್ದ ಪತಿಯ ರಕ್ಷಣೆಗೆ ಬಂದ ಪತ್ನಿಯೂ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಇಲ್ಲಿನ ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಚಂದ್ರನಾಯಕ್(56) ಮತ್ತು ಜಯಬಾಯಿ(45) ಮೃತಪಟ್ಟ ದಂಪತಿ ಎಂದು ಗುರುತಿಸಲಾಗಿದೆ. ದೊಡ್ಡಬಳ್ಳಾಪುರದ ಮೂಲದ ನಿವಾಸಿಗಳಾದ ದಂಪತಿ ಜು.12ರ ಶುಕ್ರವಾರ ಸಂಜೆ 3.40ರ ಸುಮಾರಿನಲ್ಲಿ ವಡ್ಡರಹಳ್ಳಿ-ಮಾಕಳಿ ದುರ್ಗ ರೈಲ್ವೆ ನಿಲ್ದಾಣಗಳ ಮಧ್ಯೆ ಇರುವ ತಮ್ಮ ಜಮೀನಿನ ಬಳಿಯ ರೈಲ್ವೆ ಹಳಿ ಬಳಿ ಮೇಕೆಗಳನ್ನು ಮೇಯಿಸುತ್ತಿದ್ದರು ಎನ್ನಲಾಗಿದೆ.

ಆ ವೇಳೆ ಚಂದ್ರನಾಯಕ್ ರೈಲ್ವೆ ಹಳಿ ಮೇಲೆ ನಿಂತಿದ್ದರು. ರೈಲು ಬರುತ್ತಿರುವುದನ್ನು ಗಮನಿಸಿದ ಪತ್ನಿ ಜಯಬಾಯಿ ರಕ್ಷಣೆಗೆ ಹೋದಾಗ ರೈಲು ಢಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಸಂಬಂಧ ಯಶವಂತಪುರ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News