×
Ad

ಬೆಂಗಳೂರು | ಬಾಲಕಿಯ ಮೃತದೇಹ ಪತ್ತೆ ಪ್ರಕರಣ : ವಿವರ ಕಲೆಹಾಕಿದ ಪೊಲೀಸರು

Update: 2024-07-14 18:37 IST

ಬೆಂಗಳೂರು : ಇಲ್ಲಿನ ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಬಾಲಕಿಯ ಮೃತದೇಹ ಪತ್ತೆಯಾದ ಪ್ರಕರಣ ಸಂಬಂಧ ಇದೀಗ ಮೃತ ಬಾಲಕಿಯ ವಿವರವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮೃತ ಬಾಲಕಿ ಮರಿಯಮ್(5)ಎಂದು ಆಕೆಯ ತಂದೆ ಗುರುತಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜು.3ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಮೃತ ಬಾಲಕಿಯ ತಾಯಿ ಹೀನಾ, ಗಂಡನನ್ನು ತೊರೆದು ರಾಜು ಎಂಬಾತನ ಜೊತೆ ವಾಸವಿದ್ದಳು. ಭಿಕ್ಷಾಟನೆ ಮಾಡಿಕೊಂಡಿದ್ದ ಹೀನಾ ಹಾಗೂ ರಾಜು ಜೊತೆಯಲ್ಲಿಯೇ ಮರಿಯಮ್ ಸಹ ಇರುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಮರಿಯಮ್ ಮೃತದೇಹ ಪತ್ತೆಯಾದ ದಿನದಿಂದಲೂ ಹೀನಾ ಹಾಗೂ ರಾಜು ನಾಪತ್ತೆಯಾಗಿದ್ದು, ಇಬ್ವರೂ ಸೇರಿ ಮರಿಯಮ್‍ಳನ್ನು ಹತ್ಯೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಹೀನಾ ಹಾಗೂ ರಾಜುಗಾಗಿ ಶೋಧ ನಡೆಸುತ್ತಿರುವುದಾಗಿ ಬೆಂಗಳೂರು ಕೇಂದ್ರ ರೈಲ್ವೆ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News