×
Ad

ಬೆಂಗಳೂರು | 65.47ಲಕ್ಷ ರೂ.ಮೌಲ್ಯದ ಗಾಂಜಾ ವಶ : ಇಬ್ಬರ ಬಂಧನ

Update: 2024-06-21 18:48 IST

ಬೆಂಗಳೂರು : ಚಲಿಸುವ ರೈಲುಗಳ ಮೇಲೆ ದಾಳಿ ನಡೆಸಿದ ನಗರದ ರೈಲ್ವೇ ಪೊಲೀಸರು 65,47,900 ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಜೂ.13ರಿಂದ 18ರ ವರೆಗೆ ಬೆಂಗಳೂರು ರೈಲ್ವೇ ಪೊಲೀಸ್ ವಿಭಾಗದ ಪೊಲೀಸ್ ಅಧಿಕಾರಿ ರವಿಕುಮಾರ್ ನೇತೃತ್ವದ ವಿಶೇಷ ಪಡೆ ದಾಳಿ ನಡೆಸಿದೆ. ದಾಳಿಯ ವೇಳೆ ಅಕ್ರಮವಾಗಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News