×
Ad

ಬೆಂಗಳೂರು | ಸ್ಪಾ ಮಾಲಕರಿಗೆ ಬೆದರಿಕೆ : ಸುದ್ದಿವಾಹಿನಿಯ ಸಿಇಒ ವಿರುದ್ಧ ನಾಲ್ಕನೇ ಎಫ್‍ಐಆರ್ ದಾಖಲು

Update: 2024-07-10 20:29 IST

ಬೆಂಗಳೂರು : ಸ್ಪಾ ಮಾಲಕರಿಗೆ ಬೆದರಿಕೆ ಹಾಕಿ ಹಣ ಸುಲಿಗೆಗೆ ಯತ್ನಿಸಿದ ಪ್ರಕರಣ ಸಂಬಂಧ ಖಾಸಗಿ ಸುದ್ದಿವಾಹಿನಿಯ ಸಿಇಒ ವೆಂಕಟೇಶ್ ಎಂಬುವನ ವಿರುದ್ಧ ನಾಲ್ಕನೇ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ಬೆಂಗಳೂರಿನ ಜೀವನ್ ಭೀಮಾನಗರ, ಇಂದಿರಾನಗರ, ಎಚ್‍ಎಸ್‍ಆರ್ ಲೇಔಟ್ ಬಳಿಕ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋರ್ಲೆ ವರಪ್ರಸಾದ್ ಎಂಬುವರು ನೀಡಿದ ದೂರಿನ ಬಳಿಕ ವೆಂಕಟೇಶ್ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋರಮಂಗಲದ ಟ್ರ್ಯಾಂಕೂರ್ ಇಂಟರ್ ನ್ಯಾಷನಲ್ ಸ್ಪಾ ವ್ಯವಹಾರವನ್ನು ಕಳೆದ ಐದು ತಿಂಗಳಿನಿಂದ ವರಪ್ರಸಾದ್ ನಡೆಸುತ್ತಿದ್ದರು. ಮೂವರ ಪಾಲುದಾರಿಕೆಯಲ್ಲಿ ಇಲ್ಲಿನ ಸ್ಪಾ ನಡೆಸುತ್ತಿತ್ತು. ಹೀಗಿರುವಾಗ ಆರೋಪಿ ವೆಂಕಟೇಶ್ ಕರೆ ಮಾಡಿ ತಿಂಗಳಿಗೆ 15 ಸಾವಿರ ರೂ. ಕೊಡಬೇಕು, ಇಲ್ಲದಿದ್ದರೆ ನಿಮ್ಮ ವ್ಯವಹಾರಕ್ಕೆ ತೊಂದರೆ ಮಾಡುತ್ತೇನೆ. ಅಲ್ಲದೇ, ಸುದ್ದಿ ವಾಹಿನಿಗಳಲ್ಲಿ ವಿಡಿಯೊ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ವರಪ್ರಸಾದ್ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News