×
Ad

ಚಿನ್ನಾಭರಣ ಮಳಿಗೆ ಮಾಲಕನಿಗೆ ವಂಚಿಸಿದ ಆರೋಪ; ಶ್ವೇತಾ ಗೌಡ ವಿರುದ್ಧ ಮತ್ತೊಂದು ಎಫ್ಐಆರ್

Update: 2024-12-29 18:38 IST

ಬೆಂಗಳೂರು : ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಆಪ್ತೆ ಎಂದು ನಂಬಿಸಿ ಚಿನ್ನಾಭರಣ ಮಳಿಗೆ ಮಾಲಕನಿಗೆ ವಂಚಿಸಿದ ಆರೋಪದಡಿ ಬಂಧನವಾಗಿರುವ ಶ್ವೇತಾ ಗೌಡ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಸಾಗರದ ಪ್ರಗತಿ ಚಿನ್ನಾಭರಣ ಮಳಿಗೆ ಮಾಲಕನಿಂದಲೂ 20.75 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಾಲರಾಜ್ ಎಂಬುವರು ನೀಡಿದ ದೂರಿನನ್ವಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News