×
Ad

ಬೆಂಗಳೂರು | ಯುವತಿಯನ್ನು ಅಡ್ಡಗಟ್ಟಿ ಇನ್‍ಸ್ಟಾಗ್ರಾಂ ಐಡಿ ಕೇಳಿದ್ದ ಆರೋಪಿಯ ಬಂಧನ

Update: 2025-05-02 19:50 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿ ಇನ್‍ಸ್ಟಾಗ್ರಾಂ ಐಡಿ ನೀಡುವಂತೆ ಒತ್ತಾಯಿಸಿ ದುರ್ವರ್ತನೆ ತೋರಿದ್ದ ಪ್ರಕರಣದಡಿ ಆರೋಪಿಯನ್ನು ಬಗಲಗುಂಟೆ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಯುವತಿಯ ತಾಯಿ ನೀಡಿದ ದೂರಿನನ್ವಯ ವಿನೋದ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಎ.29ರ ರಾತ್ರಿ 10:30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಯುವತಿಯನ್ನು ಟಿ.ದಾಸರಹಳ್ಳಿ ಬಳಿ ರಸ್ತೆಯಲ್ಲಿ ಅಡ್ಡಗಟ್ಟಿದ್ದ ವಿನೋದ್, ಆಕೆಯ ಇನ್‍ಸ್ಟಾಗ್ರಾಂ ಐಡಿ ನೀಡುವಂತೆ ಒತ್ತಾಯಿಸಿದ್ದ. ಈ ವೇಳೆ ಗಾಬರಿಗೊಂಡ ಯುವತಿ ತನ್ನ ತಾಯಿಗೆ ಕರೆ ಮಾಡಿದ್ದಳು.

ಆಕೆಯ ತಾಯಿ ಸ್ಥಳಕ್ಕೆ ಬರುವಷ್ಟರಲ್ಲಿ ರಸ್ತೆಯಲ್ಲಿ ಎಳೆದಾಡಿ ಕಿರುಕುಳ ನೀಡಿದ್ದ ಎನ್ನಲಾಗಿದೆ. ಯುವತಿಯ ತಾಯಿ ಸ್ಥಳಕ್ಕೆ ಬಂದಾಗ ಇಬ್ಬರನ್ನೂ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಗಲಗುಂಟೆ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದು ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News