×
Ad

‌ಬೆಂಗಳೂರನ್ನು ಕೇಂದ್ರವಾಗಿಸಿ ಉನ್ನತ ವಿದ್ಯಾಭ್ಯಾಸ ಕೇಂದ್ರ ಸ್ಥಾಪನೆ: ಜಿಫ್ರಿ ಮುತ್ತುಕೋಯ ತಂಙಳ್

Update: 2024-01-28 23:45 IST

 ಬೆಂಗಳೂರು: ಬೆಂಗಳೂರಿನಲ್ಲಿ ಸಮಸ್ತ ಮುಶಾವರ ಸಮಿತಿ ಸದಸ್ಯರು ಸಭೆ ಸೇರಿ ಕೈಗೊಂಡಿರುವ ಆರು ನಿರ್ಣಯಗಳನ್ನು ಸಮಸ್ತ ಜಮೀಯ್ಯತುಲ್ ಉಲಮಾ ಸಂಘಟನೆಯ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಪ್ರಕಟಿಸಿದರು.

ರವಿವಾರ ನಗರದ ಅರಮನೆ ಮೈದಾನದಲ್ಲಿ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಸಂಘಟನೆಯ ನೂರನೇ ವರ್ಷಾಚರಣೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿರ್ಣಯಗಳು:

ಅಹ್ಲೆ ಸುನ್ನತುಲ್ ಜಮಾಅತ್‍ ಆಶಯಗಳನ್ನು ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ಹೊಸ ವಿಧಗಳ ಆವಿಷ್ಕಾರ ಮಾಡುವುದು.

ಸಮಸ್ತದ ಕಾರ್ಯಚಟುವಟಿಕೆಗಳನ್ನು ರಾಷ್ಟ್ರ ಮತ್ತು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಏಕೀಕರಣಗೊಳಿಸಲು ಸಮನ್ವಯ ಸಮಿತಿ ರಚನೆ ಮಾಡುವುದು.

ಬೆಂಗಳೂರನ್ನು ಕೇಂದ್ರವಾಗಿಟ್ಟು ಉನ್ನತ ವಿದ್ಯಾಭ್ಯಾಸ ಕೇಂದ್ರ ಸ್ಥಾಪನೆ.

ಈಗಿರುವ ವಿದ್ಯಾಭ್ಯಾಸ ಕೇಂದ್ರಗಳನ್ನು ಮತ್ತಷ್ಟು ಉನ್ನತೀಕರಣಗೊಳಿಸುವುದು.

ಸಾಮೂಹಿಕವಾಗಿ ಸ್ವಯಂ ಸೇವೆ ಮಾಡುವ ಪದ್ಧತಿ ಈಗಾಗಲೆ ಜಾರಿಯಲ್ಲಿದೆ. ಅದಕ್ಕೆ ಮತ್ತಷ್ಟು ಸೇವೆಗಳನ್ನು ಸೇರಿಸಲಾಗುವುದು.

ಅಹ್ಲೆ ಸುನ್ನತುಲ್ ಜಮಾಅತ್‍ನ ಆಶಯ ಮತ್ತು ಆದರ್ಶಗಳಿಗೆ ವಿಧೇಯಕವಾಗಿ ಪ್ರಬೋಧನಾ ರಂಗದಲ್ಲಿ ಹೊಸ ನೀತಿಗಳನ್ನು ಪರಿಚಯಿಸುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News