ಜಿಬಿಎ ಚುನಾವಣೆ: 369 ವಾರ್ಡ್‍ಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ
ಬೆಂಗಳೂರು : ರಾಜ್ಯ ಸರಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಐದು ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್‍ವಾರು ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಶೇ.47ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಜಿಬಿಎನ ಒಟ್ಟು 369 ವಾರ್ಡ್‍ಗಳ ಪೈಕಿ ವಿವಿಧ ವರ್ಗಗಳ 176 ವಾರ್ಡ್‍ಗಳು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿಗೆ 43, ಪರಿಶಿಷ್ಟ ಪಂಗಡಕ್ಕೆ 7, ಹಿಂದುಳಿದ ವರ್ಗಗಳಿಗೆ 121 ವಾರ್ಡ್ ಮತ್ತು ಉಳಿದ ವಾರ್ಡ್‍ಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ ಒಟ್ಟು 63 ವಾರ್ಡ್‍ಗಳಿದ್ದು, ಪರಿಶಿಷ್ಟ ಜಾತಿಗೆ 11(5 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 1, ಹಿಂದುಳಿದ ವರ್ಗ-ಎಗೆ 15(ಮಹಿಳೆ 7), ಹಿಂದುಳಿದ ವರ್ಗ-ಬಿಗೆ 4 (ಮಹಿಳೆ 2) ಸಾಮಾನ್ಯ ವರ್ಗಕ್ಕೆ 32 (ಮಹಿಳೆ 16) ವಾರ್ಡ್‍ಗಳನ್ನು ಮೀಸಲಿಡಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಒಟ್ಟು 50 ವಾರ್ಡ್‍ಗಳಿದ್ದು, ಪರಿಶಿಷ್ಟ ಜಾತಿಗೆ 7 (ಮಹಿಳೆ 3), ಪರಿಶಿಷ್ಟ ಪಂಗಡಕ್ಕೆ 1, ಹಿಂದುಳಿದ ವರ್ಗ- ಎಗೆ 14 (ಮಹಿಳೆ 7), ಹಿಂದುಳಿದ ವರ್ಗ-ಬಿಗೆ 3 (ಮಹಿಳೆ 1), ಸಾಮಾನ್ಯ ವರ್ಗಕ್ಕೆ 25 (ಮಹಿಳೆ 12) ವಾರ್ಡ್‍ಗಳನ್ನು ಮೀಸಲಿಡಲಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಒಟ್ಟು 112 ವಾರ್ಡ್‍ಗಳಿದ್ದು, ಪರಿಶಿಷ್ಟ ಜಾತಿಗೆ 9 (ಮಹಿಳೆ 4), ಪರಿಶಿಷ್ಟ ಪಂಗಡಕ್ಕೆ 2 (ಮಹಿಳೆ 1), ಹಿಂದುಳಿದ ವರ್ಗ-ಎಗೆ 30 (ಮಹಿಳೆ 15), ಹಿಂದುಳಿದ ವರ್ಗ-ಬಿಗೆ 7 (ಮಹಿಳೆ 3), ಸಾಮಾನ್ಯ ವರ್ಗಕ್ಕೆ 64 (ಮಹಿಳೆ 32) ವಾರ್ಡ್‍ಗಳನ್ನು ಮೀಸಲಿಡಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ಪಾಲಿಕೆಯಲ್ಲಿ ಒಟ್ಟು 72 ವಾರ್ಡ್‍ಗಳಿದ್ದು, ಪರಿಶಿಷ್ಟ ಜಾತಿಗೆ 9 (ಮಹಿಳೆ 4), ಪರಿಶಿಷ್ಟ ಪಂಗಡಕ್ಕೆ 2 (ಮಹಿಳೆ 1), ಹಿಂದುಳಿದ ವರ್ಗ-ಎಗೆ 19 (ಮಹಿಳೆ 9), ಹಿಂದುಳಿದ ವರ್ಗ-ಬಿಗೆ 5 (ಮಹಿಳೆ 2), ಸಾಮಾನ್ಯ ವರ್ಗಕ್ಕೆ 37 (ಮಹಿಳೆ 18) ವಾರ್ಡ್‍ಗಳನ್ನು ಮೀಸಲಿಡಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಒಟ್ಟು 72ವಾರ್ಡ್‍ಗಳಿದ್ದು, ಪರಿಶಿಷ್ಟ ಜಾತಿಗೆ 7 (ಮಹಿಳೆ 3), ಪರಿಶಿಷ್ಟ ಪಂಗಡಕ್ಕೆ 1, ಹಿಂದುಳಿದ ವರ್ಗ-ಎಗೆ 19 (ಮಹಿಳೆ 9), ಹಿಂದುಳಿದ ವರ್ಗ-ಬಿಗೆ 5 (ಮಹಿಳೆ 2), ಸಾಮಾನ್ಯ ವರ್ಗಕ್ಕೆ 40 (ಮಹಿಳೆ 20) ವಾರ್ಡ್‍ಗಳನ್ನು ಮೀಸಲಿಡಲಾಗಿದೆ.