×
Ad

ಹೊಸ ವಿ ಕನ್ಸೋಲ್ ವೇದಿಕೆಯಲ್ಲಿ ಹೈಕೋರ್ಟ್ ವೀಡಿಯೊ ಕಾನ್ಫರೆನ್ಸಿಂಗ್

Update: 2025-02-08 00:02 IST

ಬೆಂಗಳೂರು : ಇನ್ನು ಮುಂದೆ ಹೊಸ ವಿ ಕನ್ಸೋಲ್ ವೇದಿಕೆಯ ಮೂಲಕ ಹೈಕೋರ್ಟ್ ತನ್ನೆಲ್ಲಾ ವೀಡಿಯೊ ಕಾನ್ಫರೆನ್ಸಿಂಗ್ ಕಲಾಪಗಳನ್ನು ನಡೆಸಲಿದೆ.

ಬೆಂಗಳೂರಿನ ಹಾಗೂ ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿನ ಎಲ್ಲ ನ್ಯಾಯಾಲಯಗಳ ವೀಡಿಯೊ ಕಾನ್ಫರೆನ್ಸಿಂಗ್ ಫೆ.10ರಿಂದ ಹಾಲಿ ಇರುವ ಝೂಮ್ ಫ್ಲಾಟ್ ಫಾರಂಗೆ ಬದಲಾಗಿ ವಿ ಕನ್ಸೋಲ್ ಫ್ಲಾಟ್ ಫಾರಂನಡಿ ನಡೆಯಲಿವೆ ಎಂದು ಹೈಕೋರ್ಟ್ ಪ್ರಕಟನೆ ತಿಳಿಸಿದೆ.

ಪ್ರಾಯೋಗಿಕ ವಿ ಕನ್ಸೋಲ್ ಫ್ಲಾಟ್ ಫಾರಂ ಅನ್ನು ಧಾರವಾಡ ಪೀಠದಲ್ಲಿ ಜಾರಿಗೊಳಿಸಲಾಗಿತ್ತು. ಅದರ ಸಾಧಕ ಬಾಧಕಗಳನ್ನು ಪರಿಶೀಲಿಸಿದ ಬಳಿಕ ಇದೀಗ ಎಲ್ಲ ನ್ಯಾಯಾಲಯಗಳಿಗೂ ಅದನ್ನು ವಿಸ್ತರಿಸಲಾಗಿದೆ. ವಕೀಲರು, ಕಕ್ಷಿದಾರರು, ಸರಕಾರಿ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಕೋರ್ಟ್ ಕಲಾಪಗಳನ್ನು ವೀಕ್ಷಿಸಲು ಮತ್ತು ಅದರಲ್ಲಿ ಭಾಗಿಯಾಗಲು ಹೊಸ ವಿ ಕನ್ಸೋಲ್ ವೇದಿಕೆಯಲ್ಲಿ ಹೇಗೆ ನೋಂದಾಯಿಸಿಕೊಳ್ಳಬೇಕೆಂಬ ಬಗ್ಗೆ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದ್ದು, ಅದು ಹೈಕೋರ್ಟ್‌ನ ವೆಬ್ ಸೈಟ್‌ನಲ್ಲಿ ಲಭ್ಯವಿದೆ ಎಂದು ಹೈಕೋರ್ಟ್ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News