×
Ad

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಖುದ್ಸಿಯಾ ನಝೀರ್

Update: 2024-06-29 23:50 IST

ಬೆಂಗಳೂರು: ಆಸ್ಟ್ರೇಲಿಯದಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್ ಯುನೈಟೆಡ್ ಮಾಸ್ಟರ್ಸ್ ವೇಟ್ ಲೆಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಗೋಲ್ಡ್ ಮೆಡಲ್ ಪಡೆದ ಐರೆನ್ ಲೇಡಿ ಆಪ್ ಇಂಡಿಯಾ ಖ್ಯಾತಿಯ ಖುದ್ಸಿಯಾ ನಝೀರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು.

ಶನಿವಾರ ಕರ್ನಾಟಕ ಭವನದಲ್ಲಿ ತಮ್ಮನ್ನು ಭೇಟಿಯಾದ ಖುದ್ಸಿಯಾ ನಝೀರ್ ಅವರಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಮುಖ್ಯಮಂತ್ರಿ ಹಾರೈಸಿದರು. ಜೂ.19 ರಿಂದ 23ರ ವರೆಗೆ ಚಾಂಪಿಯನ್ ಶಿಪ್ ನಡೆದಿತ್ತು. ಚಿನ್ನದ ಪದಕ ವಿಜೇತೆ ಖುದ್ಸಿಯಾ ಬಂಗಾರಪೇಟೆ ಮೂಲದವರಾಗಿದ್ದು, ಕೆಎಸ್ಸಾರ್ಟಿಸಿ ನೌಕರರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News