ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿ 1 ಗಂಟೆ ವೇಳೆ 41.59 ಶೇ. ಮತದಾನ

Update: 2024-05-07 08:36 GMT

ಬೆಂಗಳೂರು, ಮೇ 7: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆ ಶೇ.41.59ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 1 ಗಂಟೆ ವೇಳೆ ಶೇ.45.69ದಷ್ಟು ಮತದಾನವಾಗಿದೆ. ಅದೇರೀತಿ, ಬೆಳಗಾವಿಯಲ್ಲಿ 40.57 ಶೇ., ಬಾಗಲಕೋಟೆಯಲ್ಲಿ 41.91 ಶೇ., ವಿಜಯಪುರದಲ್ಲಿ 39.87 ಶೇ., ಕಲಬುರಗಿಯಲ್ಲಿ 37.48 ಶೇ., ರಾಯಚೂರಿನಲ್ಲಿ 38.06 ಶೇ., ಬೀದರ್ ನಲ್ಲಿ 37.97 ಶೇ., ಕೊಪ್ಪಳದಲ್ಲಿ 42.74 ಶೇ., ಬಳ್ಳಾರಿಯಲ್ಲಿ 44.36 ಶೇ., ಹಾವೇರಿಯಲ್ಲಿ 43.26 ಶೇ., ಧಾರವಾಡದಲ್ಲಿ 40.61 ಶೇ., ಉತ್ತರ ಕನ್ನಡದಲ್ಲಿ 44.22 ಶೇ., ದಾವಣಗೆರೆಯಲ್ಲಿ 42.32 ಶೇ. ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 44.98 ಶೇ. ಮತದಾನವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟನೆಯ ಮೂಲಕ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News