'ಬ್ಯಾರೀಸ್ ಇನ್ನೋಮಾರ್ಕ್'ಗೆ ಮಿಲ್ಲರ್ ನೋಲ್ ಅತ್ಯುತ್ತಮ ಡೀಲರ್ ಪ್ರಶಸ್ತಿ
ಬೆಂಗಳೂರು : ಅಮೆರಿಕ ಮೂಲದ ಕಚೇರಿ ಪೀಠೋಪಕರಣಗಳ ತಯಾರಕ ಸಂಸ್ಥೆ ಮಿಲ್ಲರ್ ನೋಲ್ ನಿಂದ ಬ್ಯಾರೀಸ್ ಇನ್ನೋಮಾರ್ಕ್ ಪ್ರೈವೇಟ್ ಲಿಮಿಟೆಡ್ ಗೆ 2026ರ ಏಷ್ಯಾ–ಪೆಸಿಫಿಕ್ ಪ್ರದೇಶದ ಅತ್ಯುತ್ತಮ ಕಾರ್ಯಕ್ಷಮತೆ ಡೀಲರ್ ಪ್ರಶಸ್ತಿ ದೊರೆತಿದೆ.
ಮಿಲ್ಲರ್ ನೋಲ್ ನ ಡೀಲರ್ ಪಾಲುದಾರ ಸಂಸ್ಥೆಯಾಗಿರುವ ಬ್ಯಾರೀಸ್ ಇನ್ನೋಮಾರ್ಕ್ ಗೆ, ಏಷ್ಯಾ–ಪೆಸಿಫಿಕ್ ಪ್ರದೇಶದ ಅತ್ಯುತ್ತಮ ಡೀಲರ್ ಗಳಲ್ಲಿ ಒಂದೆಂಬ ಮನ್ನಣೆ ದೊರೆತಿದೆ. ಬ್ಯಾರೀಸ್ ಇನ್ನೋಮಾರ್ಕ್, ಬ್ಯಾರೀಸ್ ಗ್ರೂಪ್ ನ ಬೆಂಗಳೂರಿನ ಘಟಕವಾಗಿದೆ.
ಇಂಡೋನೇಷ್ಯಾದ ಜಕಾರ್ತದಲ್ಲಿ ಆಗಸ್ಟ್ 7ರಂದು ನಡೆದ ಸಮಾರಂಭದಲ್ಲಿ ಬ್ಯಾರೀಸ್ ಇನ್ನೋಮಾರ್ಕ್ ನ ಕಾರ್ಯನಿರ್ವಾಹಕ ನಿರ್ದೇಶಕ ಮಝರ್ ಸಯ್ಯದ್ ಬ್ಯಾರಿ, ಅವರ ಪತ್ನಿ ಹಾಜಿರಾ ಮಝರ್ ಬ್ಯಾರಿ ಮತ್ತು ತಂಡದ ಮುಖ್ಯಸ್ಥರು ಪ್ರಶಸ್ತಿ ಸ್ವೀಕರಿಸಿದರು.
‘ಈ ಪ್ರಶಸ್ತಿ ನಮ್ಮ ತಂಡದ ನಿರಂತರ ಪರಿಶ್ರಮಕ್ಕೆ ದೊರೆತ ಮನ್ನಣೆಯಾಗಿದೆ. ಮಾರಾಟ ಹೆಚ್ಚಿಸುವುದು, ಗ್ರಾಹಕರ ತೃಪ್ತಿ ಕಾಪಾಡುವುದು ಮತ್ತು ಉದ್ಯಮದಲ್ಲಿ ನೈತಿಕ ಮೌಲ್ಯಗಳನ್ನು ಪಾಲಿಸುವುದಕ್ಕೆ ನಾವು ಸದಾ ಆದ್ಯತೆ ನೀಡುತ್ತೇವೆ. ನಮ್ಮ ಕಾರ್ಯಕ್ಷಮತೆಯನ್ನು ಮತ್ತಷ್ಟು ಉತ್ತಮಪಡಿಸಲು ಈ ಪ್ರಶಸ್ತಿ ಪ್ರೇರಣೆ ನೀಡಿದೆ’ಎಂದು ಮಝರ್ ಸಯ್ಯದ್ ಬ್ಯಾರಿ ಹೇಳಿದರು.