×
Ad

ಬೆಂಗಳೂರು: ಚರ್ಚ್‌ ಸ್ಟ್ರೀಟ್ ನಲ್ಲಿ ಚಹಾ ಸವಿದ ನೆದರ್ ಲ್ಯಾಂಡ್ಸ್ ಪ್ರಧಾನಿ

Update: 2023-09-11 21:44 IST

ಬೆಂಗಳೂರು: ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿದ ಬಳಿಕ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿಗೆ ಆಗಮಿಸಿರುವ ನೆದರ್ ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಸೋಮವಾರ ನಗರದ ಚರ್ಚ್ ಸ್ಟ್ರೀಟ್‍ಗೆ ಭೇಟಿ ನೀಡಿ ಚಹಾ ಸವಿದರು.

ಸೋಮವಾರ ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಚರ್ಚ್ ಸ್ಟ್ರೀಟ್‍ಗೆ ಆಗಮಿಸಿದ ಮಾರ್ಕ್ ರುಟ್ಟೆ, ಎಂ.ಜಿ.ರಸ್ತೆ ಮೆಟ್ರೊ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಇರುವ ‘ಚಾಯ್ ಪಾಯಿಂಟ್’ನಲ್ಲಿ ಚಹಾ ಖರೀದಿಸಿ ಸೇವಿಸಿದರು. ಯುಪಿಐ ಮೂಲಕ ಹಣ ಪಾವತಿಸಿದ ಅವರು, ಅಲ್ಲಿಂದ ಬೇರಿ ವೃತ್ತದ ಕಡೆಗೆ ನಡೆದು ಹೋದರು.

ಮಾರ್ಕ್ ರುಟ್ಟೆ ಅವರು ಚಾಯ್ ಪಾಯಿಂಟ್‍ನಿಂದ ಬೇರಿ ವೃತ್ತದವರೆಗೆ ಬೈಸಿಕಲ್‍ನಲ್ಲಿ ಬರಬೇಕಿತ್ತು. ಆದರೆ, ಸೈಕಲ್ ಬಿಟ್ಟು ಕಾಲ್ನಾಡಿಗೆಯಲ್ಲೇ ಸಾಗಿದರು. ಅವರೊಂದಿಗೆ ನೆದಲೆರ್ಂಡ್ ಪ್ರಧಾನಿ ಸಚಿವಾಲಯದ ಅಧಿಕಾರಿಗಳು, ಬೆಂಗಳೂರಿನಲ್ಲಿರುವ ನೆದಲೆರ್ಂಡ್ ಕಾನ್ಸುಲ್ ಜನರಲ್ ಮತ್ತು ಅವರ ಕಚೇರಿ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಸರಕಾರದ ಅಧಿಕಾರಿಗಳು ಹೆಜ್ಜೆ ಹಾಕಿದರು.

ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಾರ್ಕ್ ರುಟ್ಟೆ ಅವರು ಬೇರಿ ವೃತ್ತ ತಲುಪಿದ ಬಳಿಕ ಅಲ್ಲಿ ತಕ್ಷಶಿಲಾ ಇನ್‍ಸ್ಟಿಟ್ಯೂಷನ್ ಬಳಿಗೆ ಬಂದರು. ಇಲ್ಲಿ ಅವರು ಬೆಂಗಳೂರಿನ ವೈಶಿಷ್ಟ್ಯದ ಕುರಿತು ಶ್ಲಾಘಿಸಿದರು.





 


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News