ಮುಂಗಾರು ಅಧಿವೇಶನ | ʼಗಡಿಬಿಡಿ ಮಾಡಿದರೆ ಮಾಂಸ ತಿನ್ನಲು ಸಾಧ್ಯವಿಲ್ಲʼ..!
Update: 2024-07-24 22:50 IST
ಬೆಂಗಳೂರು : ‘ಮೆಲ್ಲನೆ ತಿಂದರೆ ಮೂಳೆಯನ್ನು ತಿನ್ನಬಹುದು, ಗಡಿಬಿಡಿ ಮಾಡಿಕೊಂಡರೆ ಮಾಂಸವನ್ನು ತಿನ್ನಲು ಸಾಧ್ಯವಿಲ್ಲ’ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದು, ಸದನದಲ್ಲಿ ನಗೆಯ ಅಲೆಯನ್ನುಕ್ಕಿಸಿತು.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ಬಳಿಕ ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ವಿಷಯ ಚರ್ಚೆಗೆ ಪಟ್ಟು ಹಿಡಿದು ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಏರಿದ ಧ್ವನಿಯಲ್ಲಿ ಗದ್ದಲ ಸೃಷ್ಟಿಸಿ, ಆರೋಪ-ಪ್ರತ್ಯಾರೂಪಕ್ಕೆ ಮುಂದಾದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್ ಅವರು, ‘ತಾಳ್ಮೆಯಿಂದ ಮೆಲ್ಲ ಮಾತನಾಡಿ, ಸುಮ್ಮನೆ ಗಡಿಬಿಡಿ ಏಕೆ ಮಾಡುತ್ತಿದ್ದೀರಿ. ಮೆಲ್ಲ ತಿಂದರೆ ಮೂಳೆಯನ್ನು ತಿನ್ನಬಹುದು. ಗಡಿಬಿಡಿ ಮಾಡಿಕೊಂಡರೆ ಮಾಂಸವನ್ನು ತಿನ್ನಲು ಸಾಧ್ಯವಿಲ್ಲ’ ಎಂದು ಉಲ್ಲೇಖಿಸಿದ್ದು, ಸದನದಲ್ಲಿ ಹಾಸ್ಯದ ಹೊನಲನ್ನು ಸೃಷ್ಟಿಸಿತು.