×
Ad

ಪತ್ರಕರ್ತ ವೆಂಕಟೇಶ ಸಂಪ ಅವರಿಗೆ "ಅಭಿರುಚಿ ಮಾಧ್ಯಮ ರತ್ನ" ಪ್ರಶಸ್ತಿ

Update: 2024-08-08 20:24 IST

ವೆಂಕಟೇಶ ಎಸ್.ಸಂಪ

ಬೆಂಗಳೂರು : ಅಭಿರುಚಿ ಬಳಗ(ರಿ), ಎನ್.ವಿ.ರಮೇಶ್ ಕಲಾ ಬಳಗ, ಆಸಕ್ತಿ ಪ್ರಕಾಶನ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನೀಡುವ ರಾಜ್ಯಮಟ್ಟದ "ಅಭಿರುಚಿ ಮಾಧ್ಯಮ ರತ್ನ" ಪ್ರಶಸ್ತಿಯನ್ನು ಪತ್ರಕರ್ತ, ಸಂಪದ ಸಾಲು ಪತ್ರಿಕೆಯ ಸಂಪಾದಕರಾದ ವೆಂಕಟೇಶ ಎಸ್.ಸಂಪ ಅವರಿಗೆ ಆ.11ರಂದು ಮೈಸೂರಿನ ನಮನ ಕಲಾ ಮಂಟಪದಲ್ಲಿ ನೀಡಲಾಗುವುದು ಎಂದು ಹಿರಿಯ ಸಾಹಿತಿ, ಅಭಿರುಚಿ ಬಳಗದ ಮುಖ್ಯಸ್ಥರಾದ ಎನ್.ವಿ.ರಮೇಶ್ ತಿಳಿಸಿದ್ದಾರೆ.

ವೆಂಕಟೇಶ ಸಂಪ ಅವರು ಕಳೆದ 17 ವರ್ಷಗಳಿಂದ ಸಂಪದ ಸಾಲು ಪತ್ರಿಕೆ ನಡೆಸುತ್ತಿದ್ದು, ಕತೆ, ಕವನ, ಲೇಖನಗಳು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಪ ಅವರು ಟಿ ವಿ, ರೇಡಿಯೋಗಳಲ್ಲಿ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿದ್ದು, ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಡಾ.ರಘುರಾಮ್ ವಾಜಪೇಯಿ ಉದ್ಘಾಟಿಸಲಿದ್ದು, ಲತಾ ಮೋಹನ್, ಕೇರೋಡಿ ಲೋಲಾಕ್ಷಿ, ಗಿರಿಜಾ ಮಾಲಿಪಾಟೀಲ್, ಸುಜಾತ ರವೀಶ್, ಸುಮಾ ಪಂಚವಳ್ಳಿ, ಮಡ್ಡಿಗೆರೆ ಗೋಪಾಲ್, ಉಮಾ ರಮೇಶ್ ಭಾಗವಹಿಸಲಿದ್ದಾರೆ ಎಂದು ಎನ್.ವಿ.ರಮೇಶ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News