×
Ad

ಬೆಂಗಳೂರು | ಅಂತರ್ ಶಾಲಾ ಸಾಂಸ್ಕೃತಿಕ ಉತ್ಸವ

Update: 2024-09-24 20:07 IST

ಬೆಂಗಳೂರು : ರ್‍ಯಾನ್‌ ಎಜುಕೇಷನ್ ಗ್ರೂಪ್ ಅಧೀನದ ಬೆಂಗಳೂರಿನ ‘ತತ್ತ್ವ ಸ್ಕೂಲ್’ ವತಿಯಿಂದ ಹಮ್ಮಿಕೊಂಡಿದ್ದ ಅಂತರ್ ಶಾಲಾ ಸಾಂಸ್ಕೃತಿಕ ಮತ್ತು ಸಾಹಿತ್ಯ ಉತ್ಸವ ಮತ್ತು 12ನೆ ಆವೃತ್ತಿಯ ತಿರಂಗ ಸ್ಪೋರ್ಟ್ ಕಾರ್ಯಕ್ರದಲ್ಲಿ 19 ಶಾಲೆಗಳಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಿರಂಗಾ ಕಾರ್ಯಕ್ರಮದಲ್ಲಿ ಅಂತರ್ ಶಾಲಾ ಕ್ರೀಡೋತ್ಸವ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಕ್ರೀಡಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಣ ಕ್ಷೇತ್ರದಲ್ಲಿ 25 ವರ್ಷಗಳ ಅನುಭವ ಹೊಂದಿರುವ, ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿರುವ ಮತ್ತು ಆಡೆನ್ ಪಬ್ಲಿಕ್ ಸ್ಕೂಲ್‍ನ ನಿರ್ದೇಶಕಿ ಮೀನಾ ಜಯಚಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ತತ್ತ್ವ ಸ್ಕೂಲ್‍ನ ಪ್ರಾಂಶುಪಾಲೆ ಮಮತಾ ರಾವ್ ಮಾತನಾಡಿ, ಕಾರ್ಯಕ್ರಮವು ಸಹಯೋಗ ತತ್ವ, ಸಕಾರಾತ್ಮಕ ಮನೋಭಾವ, ಕೌಶಲ ಪ್ರದರ್ಶನ, ಆರೋಗ್ಯಕರ ಸ್ಪರ್ಧೆ, ಸಹಿಷ್ಣುತೆ, ಸಂಯಮ, ಬುದ್ಧಿವಂತಿಕೆ, ಶಕ್ತಿ ಪ್ರದರ್ಶನ, ಕ್ರೀಡಾ ಮನೋಭಾವ, ಎಲ್ಲದಕ್ಕಿಂತ ಹೆಚ್ಚಾಗಿ ಸೌಹಾರ್ದ ಮನೋಭಾವಕ್ಕೆ ಸಾಕ್ಷಿಯಾಗಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News