×
Ad

ಬೆಂಗಳೂರು | ಬಿಎಂಟಿಸಿ ನಿರ್ವಾಹಕನ ಮೇಲೆ ಕಲ್ಲಿನಿಂದ ಹಲ್ಲೆ : ಆರೋಪಿ ವಶಕ್ಕೆ

Update: 2024-10-24 21:48 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಇತ್ತೀಚಿಗೆ ಬಿಎಂಟಿಸಿ ನಿರ್ವಾಹಕರೊಬ್ಬರಿಗೆ ಚಾಕು ಇರಿದ ಘಟನೆ ಮಾಸುವ ಮುನ್ನವೇ ಪ್ರಯಾಣಿಕನೊಬ್ಬ ಕಲ್ಲಿನಿಂದ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.

ಇಲ್ಲಿನ ಟಿನ್ ಫ್ಯಾಕ್ಟರಿ ಬಳಿ ಇತ್ತೀಚಿಗೆ ಬಸ್ ಪಾಸ್ ಪರಿಶೀಲಿಸುವ ವಿಚಾರವಾಗಿ ನಿರ್ವಾಹಕ ಸಂಗಪ್ಪ ಹಾಗೂ ಪ್ರಯಾಣಿಕ ಹೇಮಂತ್ ನಡುವೆ ಮಾತಿನ ಚಕಮಕಿ ನಡೆದಿತ್ತು.

ಇದೇ ವಿಚಾರವಾಗಿ ಅ.18ರಂದು ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣ ಬಳಿ ಆರೋಪಿ ಹೇಮಂತ್ ದೊಡ್ಡದಾದ ಕಲ್ಲಿನಿಂದ ಸಂಗಪ್ಪನ ತಲೆಗೆ ಹೊಡೆದು ಪರಾರಿ ಆಗಲು ಯತ್ನಿಸಿದ್ದಾರೆ. ನಂತರ ಪ್ರಯಾಣಿಕರು ಆತನನ್ನು ಹಿಡಿದು ಪೊಲಿಸರ ವಶಕ್ಕೆ ನೀಡಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News