×
Ad

ಬೆಂಗಳೂರು: ಪ್ರವಾಸಿ ಕೂಟ ವಿಟ್ಲ ನಿಯೋಗದಿಂದ ಡಾ. ಆರತಿ ಕೃಷ್ಣ ಭೇಟಿ

Update: 2025-02-07 18:04 IST

ಬೆಂಗಳೂರು: ಪ್ರವಾಸಿ ಕೂಟ ವಿಟ್ಲ (ರಿ) ನಿಯೋಗವು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರನ್ನು ಫೆ.5ರಂದು ಬೆಂಗಳೂರಿನ ವಿಕಾಸ ಸೌಧ ಸಭಾಂಗಣದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿತು. 

ಕರ್ನಾಟಕದಲ್ಲಿ ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಪ್ರವಾಸಿ ಸಚಿವಾಲಯ ಸ್ಥಾಪನೆ, ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಆರೋಗ್ಯ ವಿಮಾ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರವಾಸಿ ಕೂಟ ವಿಟ್ಲ ನಿಯೋಗವು ಡಾ. ಆರತಿ ಕೃಷ್ಣ ರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿತು.

ಈ ಸಂದರ್ಭ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ವಿಶೇಷವಾಗಿ ಈ ಬರುವ ಬಜೆಟ್ ನಲ್ಲಿ ಅನಿವಾಸಿಗಳಿಗೆ ಪ್ರತ್ಯೇಕ ಅನುದಾನವನ್ನು ಮೀಸಲಿಡುವಂತೆ ಡಾ. ಆರತಿ ಕೃಷ್ಣ ಮುಖಾಂತರ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಯಿತು. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು ಎಂದು ಪ್ರವಾಸಿ ಕೂಟ ವಿಟ್ಲ ನಿಯೋಗ ತಿಳಿಸಿದೆ.

ನಮ್ಮ ಸಮಿತಿಯ ಸ್ಥಾಪನೆಯ ಉದ್ದೇಶ ಹಾಗು ನಮ್ಮ ಗುರಿಯ ಬಗ್ಗೆ ವಿವರವಾಗಿ ಮಾಹಿತಿ ಪಡೆದರಲ್ಲದೆ ನಮ್ಮ ಪ್ರವಾಸಿ ಕೂಟ ವಿಟ್ಲ ( ರಿ) ಎಂಬ ಹೆಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗು ಜಗತ್ತಿನಾದ್ಯಂತ ನೆಲೆಸಿರಿವ ವಿಟ್ಲದ ಅನಿವಾಸಿಗಳಿಗಾಗಿ ನೀವು ನಡೆಸುತ್ತಿರುವ ಸಮಾಜಮುಖಿ ಕೆಲಸಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು ಎಂದು ಪ್ರವಾಸಿ ಕೂಟ ವಿಟ್ಲ ನಿಯೋಗ ತಿಳಿಸಿದೆ.

ನಿಯೋಗದಲ್ಲಿ ಪ್ರವಾಸಿ ಕೂಟ ವಿಟ್ಲ ಅಧ್ಯಕ್ಷರಾದ ಮುಹಮ್ಮದ್ ಮಸೂದ್ ವಿಟ್ಲ (ಬಹರೈನ್), ಸ್ಥಾಪಕರಾದ ಹೈದರಾಲಿ ಇಸ್ಮಾಯಿಲ್ ಮೇಗಿನಪೆಟೆ (ಸೌದಿ ಅರೇಬಿಯಾ), ಮಾಧ್ಯಮ ವಕ್ತಾರರಾದ ಝಕರಿಯಾ ಸಾಲೆತ್ತೂರು (ಖತರ್) ಹಾಗು ಬದ್ರುದ್ದೀನ್ (ಬಹರೈನ್) ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News