×
Ad

ನೂರಾರು ಕಾರ್ಮಿಕರ ವಜಾ ಪ್ರಕರಣ : ಇನ್ಫೋಸಿಸ್ ಪರವಾದ ಕಾರ್ಮಿಕ ಇಲಾಖೆಯ ಆದೇಶಕ್ಕೆ ಖಂಡನೆ

Update: 2025-03-02 22:36 IST

ಬೆಂಗಳೂರು : ಇನ್ಫೋಸಿಸ್ ನೂರಾರು ಕಾರ್ಮಿಕರನ್ನು ಯಾವುದೇ ನೋಟೀಸ್ ನೀಡದೆ ಏಕಪಕ್ಷೀಯವಾಗಿ ವಜಾಗೊಳಿಸಿದ್ದರೂ, ಇನ್ಫೋಸಿಸ್ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಕರ್ನಾಟಕ ಕಾರ್ಮಿಕ ಇಲಾಖೆಯ ಮಧ್ಯಂತರ ಆದೇಶ ನೀಡಿರುವುದನ್ನು ಐಟಿ ಮತ್ತು ಐಟಿಇಎಸ್ ಡೆಮಾಕ್ರಟಿಕ್ ಎಂಪ್ಲಾಯೀಸ್ ಅಸೋಸಿಯೇಷನ್ ಖಂಡಿಸಿದೆ.

ರವಿವಾರ ಸಂಘಟನೆಯು ಪ್ರಕಟನೆ ಹೊರಡಿಸಿದ್ದು, ಇನ್ಫೋಸಿಸ್ ಕಾರ್ಮಿಕರನ್ನು ಸೇರಿಸಿಕೊಳ್ಳಲು 2.5 ವರ್ಷಗಳವರೆಗೆ ಕಾಯುವಂತೆ ಮಾಡಿತ್ತು. ಆದರೆ ಈಗ ಏಕಾಏಕಿ ನೂರಾರು ಕಾರ್ಮಿಕರನ್ನು ವಜಾಮಾಡಿದೆ. ಆದರೆ ಕಾರ್ಮಿಕರು ಕಾರ್ಮಿಕ ಇಲಾಖೆಗೆ ದೂರು ನೀಡಿದ್ದು, ಇಲಾಖೆಯು ಇನ್ಫೋಸಿಸ್ ಪರವಾಗಿ ಆದೇಶ ನೀಡಿದೆ ಎಂದು ತಿಳಿಸಿದೆ.

ಇನ್ಫೋಸಿಸ್ ಕಾರ್ಮಿಕರನ್ನು ವಜಾಗೊಳಿಸಿದ ಪ್ರಕರಣವನ್ನು ಮರುಪರಿಶೀಲನೆ ಮಾಡಬೇಕು. ಕಾರ್ಮಿಕರಿಗೆ ಅನ್ಯಾಯವನ್ನು ಗುರುತಿಸಿ ನ್ಯಾಯವನ್ನು ಎತ್ತಿಹಿಡಿಯಬೇಕು. ಇಲಾಖೆಯು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸಂಘಟನೆಯು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News