ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಂದಿನಿ ಹಾಲಿನ ಸಂಸ್ಕರಣಾ ಘಟಕ ಆರಂಭ
ಬೆಂಗಳೂರು: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಂದಿನಿ ಹಾಲಿನ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ(ಕೆ.ಎಂ.ಎಫ್) ತಿಳಿಸಿದೆ.
ಬುಧವಾರ ಕೆಎಂಎಫ್ ಪ್ರಕಟನೆ ಹೊರಡಿಸಿದ್ದು, ಇತ್ತೀಚಿಗಷ್ಟೇ ಸಂಸ್ಥೆಯು ದಿಲ್ಲಿ ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳನ್ನು ಪ್ರಾರಂಭಿಸಲಾಗಿದೆ. ಹೀಗಾಗಿ ಮಾರುಕಟ್ಟೆ ಪ್ರದೇಶಗಳ ಸುತ್ತಮುತ್ತಲಿನ ನಗರಗಳಿಗೆ ಮಾರಾಟ ಜಾಲ ವಿಸ್ತರಣೆ ಕಾರ್ಯಚಟುವಟಿಕೆ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದೆ.
ಪ್ರಸ್ತುತ ದಿಲ್ಲಿ ನಗರಕ್ಕೆ ಸಮೀಪದ ಉತ್ತರಪ್ರದೇಶ ರಾಜ್ಯದ ಹತ್ರಾಸ್ ಜಿಲ್ಲೆಯಲ್ಲಿ ನೂತನ ಹಾಲು ಸಂಸ್ಕರಣಾ ಘಟನಕವನ್ನು ಕೆಎಂಎಫ್ ಗುರುತಿಸಿದೆ. ಘಟಕದ ಸುತ್ತಮುತ್ತಲಿನ ನಗರ ಪ್ರದೇಶಗಳಾಸ ಆಗ್ರಾ, ಮಥುರ, ಮೀರತ್, ಅಲಿಘರ್ ಪ್ರದೇಶಗಳಲ್ಲಿ ನಂದಿನಿ ಹಾಲು ಮಾರಾಟವನ್ನು ಪ್ರಾರಂಭಿಸುವ ಸಂಬಂಧ ಅಲ್ಲಿನ ಮಾರಾಟಗಾರರ ಸಭೆಯನ್ನು ನಡೆಸಿದ್ದು, ಈ ಪ್ರದೇಶಗಳಲ್ಲಿ ಮಾ.16ರರಿಂದ ನಂದಿನ ಹಾಲು ಮತ್ತು ಮೊಸರು ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ರಾಜಸ್ಥಾನದ ಜೈಪುರದಲ್ಲಿ ಈ ತಿಂಗಳಿನಲ್ಲಿಯೇ ಹಾಲು ಮಾರಾಟ ಪ್ರಾರಂಭಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.