×
Ad

ಪಯಾಮ್-ಎ-ಇನ್ಸಾನಿಯತ್ ಫೋರಂ: ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ

Update: 2025-06-30 22:39 IST

ಬೆಂಗಳೂರು : ಆಲ್ ಇಂಡಿಯಾ ಪಯಾಮ್-ಎ-ಇನ್ಸಾನಿಯತ್ ಫೋರಂ ವತಿಯಿಂದ ಸೋಮವಾರ ನಗರದ ವಿಲ್ಸನ್ ಗಾರ್ಡನ್‍ನ ಹೊಂಬೆ ಗೌಡ ಸರಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‍ಬುಕ್‍ಗಳು ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ಹುಸೈನಿ ನದ್ವಿ, ಪಯಾಮ್ ಎ ಇನ್ಸಾನಿಯತ್ ಚಳವಳಿಯು ಐವತ್ತು ವರ್ಷಗಳ ಹಿಂದೆ ದೇಶದ ಶ್ರೇಷ್ಠ ವಿದ್ವಾಂಸರಿಂದ ಆರಂಭವಾಯಿತು. ಇದು ಮಾನವೀಯ ಮೌಲ್ಯಗಳ ಆಧಾರದ ಮೇಲೆ ನಿಂತಿರುವ ಈ ಚಳವಳಿಯು ಧಾರ್ಮಿಕ ಹಾಗೂ ರಾಜಕೀಯ ಉದ್ದೇಶಗಳಿಂದ ದೂರವಿದೆ ಎಂದು ಹೇಳಿದರು.

ನಾವು ಇಲ್ಲಿ ಧರ್ಮ ಅಥವಾ ರಾಜಕೀಯದ ಬಗ್ಗೆ ಮಾತನಾಡಲು ಬಂದಿಲ್ಲ. ಕೇವಲ ಮಾನವೀಯತೆಯ ಬಗ್ಗೆ ಮಾತ್ರ ಮಾತನಾಡುತ್ತೇವೆ. ಮನುಷ್ಯರಾಗಿರುವ ಪರಸ್ಪರ ಪ್ರೀತಿ, ಗೌರವ, ಸಹೋದರತೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರಾಥಮಿಕ ಶಿಕ್ಷಣದ ಹಂತದಲ್ಲೆ ನಾವು ಮತ್ತೊಬ್ಬರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಂಡರೆ, ಅದು ನಮ್ಮ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗಲಿದೆ. ನಮ್ಮಲ್ಲಿ ಮಾನವೀಯ ಗುಣಗಳ ವಿಕಸನಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಸೈಯದ್ ಶಫಿಉಲ್ಲಾ, ಮುಫ್ತಿ ಉಮರ್ ಫಾರೂಕ್ ಖಾಸ್ಮಿ, ಮುಫ್ತಿ ಝಬೀಉಲ್ಲಾ ಖಾನ್ ಖಾಸ್ಮಿ, ಮುದಸ್ಸಿರ್ ಮೂಸಾ, ನಿವೃತ್ತ ಕೆಎಎಸ್ ಅಧಿಕಾರಿ ಸಿದ್ದಿಕ್ ಪಾಷಾ, ಇಂಜಿನಿಯರ್ ನಾಸಿರ್, ಸಾಹಿಬ್, ಸೈಯದ್ ಸರ್ದಾರ್ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು. ಶಾಲಾ ಆಡಳಿತವು ಎಲ್ಲ ಅತಿಥಿಗಳನ್ನು ಸ್ವಾಗತಿಸಿ, ಪಯಾಮ್ ಎ ಇನ್ಸಾನಿಯತ್ ಫೋರಂನ ಈ ಉಪಕ್ರಮಕ್ಕೆ ಕೃತಜ್ಞತೆ ಸಲ್ಲಿಸಿತು ಎಂದು ಪಯಾಮ್ ಎ ಇನ್ಸಾನಿಯತ್ ನ ರಿಝ್ವಾನ್ ಬೇಗ್ ಖಾಸ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News