ಬೈಕ್ ಟ್ಯಾಕ್ಸಿ ಅನುಮತಿ ಕೋರಿ ಮೇಲ್ಮನವಿ : ಮಹಿಳೆಯರಿಂದಲೂ ಮಧ್ಯಂತರ ಅರ್ಜಿ ಸಲ್ಲಿಕೆ
Update: 2025-07-03 00:03 IST
ಬೆಂಗಳೂರು : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ರಾಜ್ಯಸರಕಾರಕ್ಕೆ ನಿರ್ದೇಶನ ಕೋರಿದ್ದ ಮೇಲ್ಮನವಿ ಸಲ್ಲಿಸಲಾಗಿದೆ. ಈ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇದೇ ವೇಳೆ ಹೈಕೋರ್ಟ್‌ಗೆ ಮಹಿಳಾ ಪ್ರಯಾಣಿಕರಿಂದಲೂ ಮಧ್ಯಂತರ ಅರ್ಜಿಯನ್ನ ಸಲ್ಲಿಸಲಾಗಿತ್ತು. ಅರ್ಜಿಯಲ್ಲಿ ಬೈಕ್ ಟ್ಯಾಕ್ಸಿಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲವೇ ಹೆಚ್ಚಿದೆ. ಅಗ್ಗ, ಸುಲಭ ಹಾಗೂ ಸುರಕ್ಷತೆಯೂ ಇದೆ ಎಂದು ಅರ್ಜಿದಾರ ಪರ ವಕೀಲರು ವಾದ ಮಂಡಿಸಿದರು. ಕೇರಳ, ತಮಿಳುನಾಡಿನಲ್ಲಿ ಕೂಡಾ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲಾಗಿದೆ.ಬೆಂಗಳೂರಿನಲ್ಲಿ ಮೆಟ್ರೊ ರೈಲು ಸಂಪರ್ಕವೂ ಸೀಮಿತವಾಗಿದೆ. ಒಂದೆಡೆಯಿಂದ, ಮತ್ತೊಂದೆಡೆಗೆ ಕಾರಿನಲ್ಲಿ ಸಂಚರಿಸಲು ಗಂಟೆಗಳೇ ಬೇಕು ಎಂದು ಕೋರ್ಟ್ ಗಮನಕ್ಕೆ ತಂದರು. ಊಬರ್ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್ ವಿಚಾರಣೆ ಮುಂದೂಡಿದೆ.