‘ಒಳಮೀಸಲಾತಿ ಸಮೀಕ್ಷಾ ಕಾರ್ಯ’: ಕರ್ತವ್ಯಲೋಪ ಎಸಗಿರುವ ಮೂವರು ಸಿಬ್ಬಂದಿಗಳ ಅಮಾನತು
Update: 2025-07-05 18:10 IST
ಸಾಂದರ್ಭಿಕ ಚಿತ್ರ
ಬೆಂಗಳೂರು : ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯನ್ನು ನೀಡುವ ಉದ್ದೇಶದಿಂದ ಕೈಗೊಂಡಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಸಂಬಂಧ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಮೂವರನ್ನು ಶನಿವಾರದಂದು ಅಮಾನತು ಮಾಡಲಾಗಿದೆ.
ಪಶ್ಚಿಮ ವಲಯದ ಮತ್ತಿಕೆರೆ ಉಪ ವಿಭಾಗದ ಮೌಲ್ಯಮಾಪಕ ರಾಮಾಂಜನೇಯಲು, ಆರ್.ಆರ್.ನಗರ ವಲಯದ ಕೆಂಗೇರಿ ಉಪ ವಿಭಾಗದ ಮೌಲ್ಯಮಾಪಕ ಪ್ರವೀಣ್ ಕುಮಾರ್ ಸಿ.ಎನ್. ಮತ್ತು ಗೋವಿಂದರಾಜನಗರ ಉಪ ವಿಭಾಗದ ಕಂದಾಯ ಮೌಲ್ಯಮಾಪಕ ಹನುಮಂತರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.