ಬೆಂಗಳೂರು | ಮಳಿಗೆಗೆ ನುಗ್ಗಿ ಪಿಸ್ತೂಲ್‍ನಿಂದ ಬೆದರಿಸಿ ಚಿನ್ನಾಭರಣ ಕಳವು
ಸಾಂದರ್ಭಿಕ ಚಿತ್ರ | PC : freepik.
ಬೆಂಗಳೂರು : ಚಿನ್ನಾಭರಣ ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಮಾಲಕನಿಗೆ ಪಿಸ್ತೂಲ್‍ನಿಂದ ಬೆದರಿಸಿ 180 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾಚೋಹಳ್ಳಿ ಗೇಟ್ ಸಮೀಪದ ರಾಮ್ ಚಿನ್ನಾಭರಣ ಮಳಿಗೆ ಮಾಲಕ ಜು.24ರ ರಾತ್ರಿ ಒಬ್ಬರೇ ಇದ್ದ ಸಂದರ್ಭದಲ್ಲಿ ಮೂವರು ದುಷ್ಕರ್ಮಿಗಳು ಮಳಿಗೆಗೆ ನುಗ್ಗಿ ಪಿಸ್ತೂಲಿನಿಂದ ಅವರನ್ನು ಬೆದರಿಸಿ 180 ಗ್ರಾಂ ಚಿನ್ನಾಭರಣ ಚೀಲದಲ್ಲಿ ತುಂಬಿಕೊಂಡಿದ್ದಾರೆ. ಈ ವೇಳೆ ಮಾಲಕ ಕಿರುಚಾಡುತ್ತಿದ್ದುದ್ದನ್ನು ಕೇಳಿ ಪಕ್ಕದ ಅಂಗಡಿಯ ಯುವಕರು ಬರುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಮಳಿಗೆಯ ಸಿಸಿ ಕ್ಯಾಮೇರಾವನ್ನು ಪರಿಶೀಲಿಸಿದಾಗ ಮೂವರು ಪಿಸ್ತೂಲ್ ತೋರಿಸಿ ಆಭರಣ ದೋಚಿರುವುದು ಗೊತ್ತಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.