×
Ad

ಆಸ್ಟರ್ ಸಿಎಂಐ ಆಸ್ಪತ್ರೆಯಿಂದ ಹಾರ್ಟ್ ಫೇಲ್ಯೂರ್ ಕ್ಲಿನಿಕ್ ಮತ್ತು ಡೇ ಕೇರ್ ಸೆಂಟರ್ ಪ್ರಾರಂಭ

Update: 2023-12-18 22:42 IST

ಬೆಂಗಳೂರು: ಆಸ್ಟರ್ ಸಿಎಂಐ ಆಸ್ಪತ್ರೆಯು ಹೃದಯ ವೈಫಲ್ಯ ಅನುಭವಿಸುವ ರೋಗಿಗಳಿಗೆ ಹೆಚ್ಚಿನ ವೈದ್ಯಕೀಯ ಸೇವೆಗಳನ್ನು ಒದಗಿಸುವ ಅತ್ಯಾಧುನಿಕ ಡೇ ಕೇರ್ ಸೆಂಟರ್ ಅನ್ನು ಸೋಮವಾರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಉದ್ಘಾಟಿಸಿದರು.

ಆಸ್ಟರ್ ಸಿಎಂಐ ಆಸ್ಪತ್ರೆ ಸಿಒಒ ಎಸ್‍ಜಿಎಸ್ ಲಕ್ಷ್ಮಣ, ಮಾತನಾಡಿ, ‘ಹಾರ್ಟ್ ಫೇಲ್ಯೂರ್ ಕ್ಲಿನಿಕ್ ಮತ್ತು ಡೇಕೇರ್ ಸೌಲಭ್ಯವನ್ನು ಬಹು-ಶಿಸ್ತೀಯ ತಜ್ಞರು ಮತ್ತು ಹೃದ್ರೋಗ ತಜ್ಞರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಹೃದಯ ವೈಫಲ್ಯ ನಿರ್ವಹಣೆಯ ಕ್ಷೇತ್ರದಲ್ಲಿ ವೈದ್ಯಕೀಯ ಆವಿಷ್ಕಾರಗಳನ್ನು ಗಮನಿಸಿ ಅದನ್ನು ಅಳವಡಿಸಿಕೊಂಡು ವಿಶೇಷ ಸುಸಜ್ಜಿತ ಕ್ಲಿನಿಕ್‍ನಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.

ಆಸ್ಟರ್ ಸಿಎಂಐ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಮುಖ್ಯ ಸಲಹಾತಜ್ಞ ಡಾ.ನಾಗಮಲೇಶ್ ಯು.ಎಂ. ಮಾತನಾಡಿ, ವೈದ್ಯಕೀಯ ಪ್ರಗತಿಯ ಹೊರತಾಗಿಯೂ, ಹೃದಯ ವೈಫಲ್ಯದ ರೋಗಿಗಳ ಅನಾರೋಗ್ಯ ಮತ್ತು ಸಾವಿನ ಪ್ರಮಾಣ ಹೆಚ್ಚಿದೆ. ಇದಕ್ಕೆ ದಾರಿತಪ್ಪಿಸುವ ಯೋಜನೆಗಳು ಮತ್ತು ಜನರ ಕೈಯನ್ನು ಬರಿದುಮಾಡುತ್ತಿರುವ ಸಾಮಾಜಿಕ ವೆಚ್ಚಗಳೂ ಇದಕ್ಕೆ ಕಾರಣವಾಗಿವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News