×
Ad

ಬೆಂಗಳೂರಿನಲ್ಲಿ ಐಶಾರಾಮಿ ವಾಹನಗಳ ವಿರುದ್ಧ ಕಾರ್ಯಾಚರಣೆ: 3.02 ಕೋಟಿ ರೂ. ದಂಡ ವಸೂಲಿ

Update: 2025-06-16 20:45 IST

ಬೆಂಗಳೂರು: ತೆರಿಗೆ ವಂಚನೆ ಮತ್ತು ನಕಲಿ ನೋಂದಣಿ ಮೂಲಕ ರಾಜ್ಯ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದುಬಾರಿ ಕಾರುಗಳ ವಿರುದ್ಧ ಕಾರ್ಯಾಚರಣೆ ನಡೆಸಿದ RTO ಅಧಿಕಾರಿಗಳು ಹಲವು ವಾಹನಗಳನ್ನು ವಶಕ್ಕೆ ಪಡೆದು ಸುಮಾರು 3.02 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.

ಬೆಂಗಳೂರು ಕೇಂದ್ರದ ಅಪರ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸಿದ RTO ಅಧಿಕಾರಿಗಳು, ರೋಲ್ಸ್ ರಾಯ್ಸ್ ಕುಲಿನನ್, ಎರಡು ಮರ್ಸಿಡಿಸ್, ಪೋರ್ಷೆ ಕೇಮನ್ ಹಾಗೂ ಆಡಿ ಎ4 ವಾಹನಗಳನ್ನು ವಶಪಡಿಸಿಕೊಡಿದ್ದಾರೆ. ಈ ವಾಹನಗಳ ಒಟ್ಟು ಮೌಲ್ಯ 14.95 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಈ ವಾಹನಗಳು ನಕಲಿ ನೋಂದಣಿ ಮತ್ತು ತೆರಿಗೆ ವಂಚನೆ ಮಾಡಿ ಮೈಸೂರಿನಲ್ಲಿ ಓಡಾಡುತ್ತಿದ್ದವು. ಈ ಕುರಿತು ಖಚಿತ ಮಾಹಿತಿ ಪಡೆದ ಆರ್‍ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಾಹನಗಳನ್ನು ವಶಡಿಸಿಕೊಂಡಿದ್ದಲ್ಲದೆ, ವಾಹನ ಮಾಲಕರಿಂದ 3.02 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಬೆಂಗಳೂರು ದಕ್ಷಿಣ ಹಿರಿಯ ಮೋಟಾರು ನಿರೀಕ್ಷಕ ಎನ್.ರಂಜಿತ್, ಆರ್‍ಟಿಒ 55ರ ಹಿರಿಯ ಮೋಟಾರು ನಿರೀಕ್ಷಕ ಇಮ್ತಿಯಾಝ್ ಪಾಷ, ಪಶ್ಚಿಮ ವಿಭಾಗದ ಮೋಟಾರು ನಿರೀಕ್ಷಕ ವಿಜಯ್ ಕುಮಾರ್, ವಲಯ 9ರ ಆರ್‍ಟಿಒ ರಾಮಚಂದ್ರ ಮತ್ತು ಮೋಟಾರು ನಿರೀಕ್ಷಕ ಅಲಿ ಉದ್ದೀನ್ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News