×
Ad

ರಾಜ್ಯದ 21 ಪೊಲೀಸರಿಗೆ ರಾಷ್ಟ್ರಪತಿ ಪದಕ

Update: 2025-01-25 19:34 IST

ಬೆಂಗಳೂರು : ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಇಬ್ಬರು ಡಿಐಜಿಪಿ ಹಾಗೂ ಕೆಎಸ್ಸಾಆರ್ಪಿಯ ಕಮಾಂಡೆಂಟ್ ಸೇರಿದಂತೆ ಒಟ್ಟು 21 ಪೊಲೀಸರಿಗೆ ಪ್ರಸ್ತುತ ಸಾಲಿನ ರಾಷ್ಟ್ರೀಯ ಪದಕ ಲಭಿಸಿದೆ.

ವಿಶಿಷ್ಟ ಸೇವಾ ಪದಕ ಗೌರವಕ್ಕೆ ಕೆಎಸ್ಸಾಆರ್ಪಿ ಡಿಐಜಿಪಿ ಬಸವರಾಜ ಶರಣಪ್ಪ ಜಿಳ್ಳೆ - ಡಿಐಜಿಪಿ, ಕೆಎಸ್ಸಾಆರ್ಪಿ ಕಮಾಂಡೆಂಟ್ ಹಂಝಾ ಹುಸೇನ್ ಭಾಜರಾಗಿದ್ದಾರೆ.

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು :

ಡಿಸಿಆರ್‌ಇ ಡಿಐಜಿಪಿ ರೇಣುಕಾ ಕೆ.ಸುಕುಮಾರ್, ಪೊಲೀಸ್ ಪ್ರಧಾನ ಕಚೇರಿ ಎಐಜಿಪಿ ಡಾ.ಸಂಜೀವ್ ಎಂ.ಪಾಟೀಲ್, ಐಆರ್‌ಬಿ ಕಮಾಂಡೆಂಟ್ ಬಿ.ಎಂ.ಪ್ರಸಾದ್, ಕೆಎಸ್ಸಾಆರ್ಪಿ ಉಪ ಕಮಾಂಡೆಂಟ್ ಎನ್.ವೀರೇಂದ್ರ ನಾಯಕ್, ಸಿಸಿಬಿ ಎಸಿಪಿ ಡಿ.ಗೋಪಾಲ್ ಜೋಗಿನ, ಡಿವೈಎಸ್ಪಿ ಗೋಪಾಲಕೃಷ್ಣ ಬಿ.ಗೌಡರ್.

ಪೊಲೀಸ್ ಇನ್ಸ್‍ಪೆಕ್ಟರ್‌ಗಳಾದ ಎಚ್.ಗುರುಬಸವರಾಜ, ಎಚ್.ಜಯರಾಜ್, ಪ್ರದೀಪ್ ಬಿ.ಆರ್, ಮುಹಮ್ಮದ್ ಮುಕರ್ರಮ್, ವಸಂತ ಕುಮಾರ್ ಎಂ.ಎ ಹಾಗೂ ಎಎಸ್ಸೈಗಳಾದ ವಿ.ಜಿ.ಮಂಜುನಾಥ್, ಅಲ್ತಾಫ್ ಹುಸೇನ್ ಎನ್ ದಖನಿ, ಕೆಎಸ್ಸಾಆರ್ಪಿಯ ಆರ್‌ಎಚ್‍ಸಿ ಬಲೇಂದ್ರನ್.

ಸಿಎಚ್‍ಸಿ ಅರುಣ ಕುಮಾರ್, ಚಿಕ್ಕಮಗಳೂರಿನ ಡಿಪಿಒ ಸಿಎಚ್‍ಸಿ ನಯಾಝ್ ಅಂಜುಮ್, ಸಿಎಚ್‍ಸಿಗಳಾದ ಶ್ರೀನಿವಾಸ್ ಎಂ., ಶಿವಾನಂದ.ಬಿ, ಗುಪ್ತ ವಾರ್ತೆಯ ಹಿರಿಯ ಗುಪ್ತ ಸಹಾಯಕ, ಪಿ.ಎಂ.ಅಶ್ರಫ್ ಭಾಜನರಾಗಿದ್ದಾರೆ.

ಗೃಹ ದಳ: ಕರ್ನಾಟಕ ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಆರು ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಇಬ್ಬರು ಅಧಿಕಾರಿಗಳು 2025ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿಗಳ ಪದಕಕ್ಕೆ, ಪಾತ್ರರಾಗಿದ್ದಾರೆ.

ವಿಜಯನಗರ ಗೃಹ ರಕ್ಷಕ ದಳದ ಹಿರಿಯ ಪ್ಲಾಟೂನ್ ಕಮಾಂಡರ್ ಗಿರೀಶ್ ಎಸ್‍ಎಂ., ಮೈಸೂರು ಜಿಲ್ಲೆಯ ಗೃಹ ರಕ್ಷಕ ದಳದ ಹಿರಿಯ ಪ್ಲಾಟೂನ್ ಕಮಾಂಡರ್ ನಿಂಗರಾಜು ಪಿ. ಹಾಗೂ ಕಂಪೆನಿ ಕ್ವಾಟರ್ ಮಾಸ್ಟರ್ ಸೆರ್‌ ಗಂಟ್ ಬಾಬುರಾವ್ ಬಿ.ಇ. , ಬೆಂಗಳೂರಿನ ನಾಗರೀಕ ರಕ್ಷಣಾ ಅಧಿಕಾರಿ ಕಮಾಂಡಿಂಗ್ ತರಬೇತಿ ವಿಭಾಗದ ಡಾ.ಮ್ಯಾಥ್ಯೂ ವರ್ಗೀಸ್ ಹಾಗೂ ಡಿವೀಜನಲ್ ವಾರ್ಡನ್‍ಗಳಾದ ಇಸ್ಮಾಯಿಲ್ ಮುಹಮ್ಮದ್ ಮಿರ್ಜಾ ಮತ್ತು ಮುಹಮ್ಮದ್ ಅಝೀಮುಲ್ಲಾ ಈ ಪದಕಕ್ಕೆ ಪಾತ್ರರಾಗಿದ್ದಾರೆ.

ಹಾಗೆಯೇ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಅಧಿಕಾರಿಗಳಾದ ಉಪನಿರ್ದೇಶಕರಾದ (ಅಗ್ನಿ ನಿಯಂತ್ರಣ) ಡಾ.ಯೂನಸ್ ಅಲಿ ಕೌಸರ್ ಹಾಗೂ ಉಪನಿರ್ದೇಶಕರಾದ (ಆಡಳಿತ) ತಿಪ್ಪೇಸ್ವಾಮಿ.ಜಿ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News