ಮೆಟ್ರೋ ನಿಲ್ದಾಣದಲ್ಲಿ ಸ್ವಯಂ ಸೇವಾ ಕ್ಯೂಆರ್-ಆಧಾರಿತ ಟಿಕೆಟ್ ವ್ಯವಸ್ಥೆ
Update: 2025-05-07 19:11 IST
ಬೆಂಗಳೂರು : ಮೆಟ್ರೋ ಟಿಕೇಟ್ ಅನ್ನು ಮತ್ತಷ್ಟು ಸುಲಭವಾಗಿ ಪಡೆಯಲು ಇಲ್ಲಿನ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 10 ನೂತನ ಸ್ವಯಂ ಸೇವಾ ಕ್ಯೂಆರ್-ಆಧಾರಿತ ಟಿಕೆಟ್ ನೀಡುವ ಯಂತ್ರಗಳನ್ನು ಅಳವಡಿಸಿದೆ.
ಸರಳವಾದ ಎರಡು-ಹಂತದ ಪ್ರಕ್ರಿಯೆಯೊಂದಿಗೆ, ಪ್ರಯಾಣಿಕರು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಟಿಕೆಟ್ ಪಡೆಯಬಹುದು. ಪ್ರಯಾಣಿಕರು ಯಂತ್ರದ ಡಿಸ್‍ಪ್ಲೇನಲ್ಲಿ ಡ್ರಾಪ್-ಡೌನ್ ಮೆನು ಅಥವಾ ನಕ್ಷೆಯನ್ನು ಉಪಯೋಗಿಸಿ ಗಮ್ಯಸ್ಥಾನವನ್ನು ಆಯ್ಕೆ ಮಾಡಬಹುದು. ನಂತರ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ, ಫೇರ್ ಪರಿಶೀಲಿಸಬಹುದು.
ಬಳಿಕ ಯಾವುದೇ ಯುಪಿಐ ಆಧಾರಿತ ಮೊಬೈಲ್ ಆ್ಯಪ್‍ಗಳ ಮೂಲಕ ಪಾವತಿ ಮಾಡಬಹುದಾಗಿದೆ. ಪಾವತಿ ಯಶಸ್ವಿಯಾದ ತಕ್ಷಣವೇ ಪೇಪರ್ ಕ್ಯೂಆರ್ ಟಿಕೆಟ್ ಪ್ರಕಟವಾಗುತ್ತದೆ. ಈ ಕ್ಯೂಆರ್ ಟಿಕೆಟ್‍ಗಳನ್ನು ನಿಲ್ದಾಣದ ಎಂಟ್ರಿ ಮತ್ತು ಎಕ್ಸಿಟ್‍ಗಳಲ್ಲಿ ಬಳಸಬಹುದಾಗಿದೆ ಎಂದು ನಮ್ಮ ಮೆಟ್ರೋ ಪ್ರಕಟನೆಯಲ್ಲಿ ತಿಳಿಸಿದೆ.