ಎಸ್‍ಐಆರ್: 54.68 ಲಕ್ಷ ಎನ್ಯುಮರೇಷನ್ ಫಾರಂ ವಿತರಣೆ
ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ರಾಜ್ಯದಲ್ಲಿ ಆರಂಭವಾದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಬುಧವಾರ ಸಂಜೆ 6 ಗಂಟೆವರೆಗೆ ಒಟ್ಟು 54,68,607 ಎನ್ಯುಮರೇಷನ್ ಫಾರಂಗಳನ್ನು ಬೂತ್ ಮಟ್ಟದ ಅಧಿಕಾರಿ(ಬಿಎಲ್‍ಒ)ಗಳು ಮತದಾರರಿಗೆ ವಿತರಣೆ ಮಾಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
ಈ ಪೈಕಿ 2,38,453 ಎನ್ಯುಮರೇಷನ್ ಫಾರಂಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಆನ್‍ಲೈನ್ ಮೂಲಕ 26,213 ಮಂದಿ ಮತದಾರರು ಎನ್ಯುಮರೇಷನ್ ಫಾರಂಗಳನ್ನು ಭರ್ತಿ ಮಾಡಿದ್ದಾರೆ. 816 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ, 1383 ಮತದಾರರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಎನ್ಯುಮರೇಷನ್ ಫಾರಂ ವಿತರಣೆ: ಗುಲ್ಬರ್ಗ-4,06,323, ದಾವಣಗೆರೆ-3,95,307, ಕೊಪ್ಪಳ-3,62,915, ಹಾಸನ-3,42,341, ಬೆಳಗಾವಿ-2,71,038, ಯಾದಗಿರಿ-2,59,089, ತುಮಕೂರು-2,57,185, ಉತ್ತರಕನ್ನಡ-2,25,784, ಶಿವಮೊಗ್ಗ-2,20,499, ಬೆಂಗಳೂರು ನಗರ-1,28,403, ಬೆಂಗಳೂರು ಗ್ರಾಮಾಂತರ-1,17,124, ದಕ್ಷಿಣ ಕನ್ನಡ-1,02,035, ಉಡುಪಿ-65,395 ಸೇರಿದಂತೆ ರಾಜ್ಯಾದ್ಯಂತ 54,68,607 ಎನ್ಯುಮರೇಷನ್ ಫಾರಂಗಳನ್ನು ವಿತರಿಸಲಾಗಿದೆ.
ಎನ್ಯುಮರೇಷನ್ ಫಾರಂಗಳ ಡಿಜಿಟಲೀಕರಣ: ರಾಯಚೂರು-33,612, ಬಳ್ಳಾರಿ-16,924, ಚಿತ್ರದುರ್ಗ-14,809, ಚಿಕ್ಕಬಳ್ಳಾಪುರ-14,377, ಕೊಪ್ಪಳ-14,247, ಹಾವೇರಿ-13,925, ಮಂಡ್ಯ-11,214, ಹಾಸನ-10,662 ಎನ್ಯುಮರೇಷನ್ ಫಾರಂಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.