×
Ad

ಅಂತಾರಾಷ್ಟ್ರೀಯ ಶಾಸಕರ ಸಮ್ಮೇಳನದಲ್ಲಿ ಭಾಗವಹಿಸಿ ಬೆಂಗಳೂರಿಗೆ ತಲುಪಿದ ಸ್ಪೀಕರ್ ಯುಟಿ ಖಾದರ್

Update: 2024-08-14 22:38 IST

ಬೆಂಗಳೂರು: ಅಂತಾರಾಷ್ಟ್ರೀಯ ಶಾಸಕರ ಸಮ್ಮೇಳನದಲ್ಲಿ ಭಾಗವಹಿಸಿ ಇಂದು ಸಭಾಧ್ಯಕ್ಷ ಯು ಟಿ ಖಾದರ್ ಅವರು ಬೆಂಗಳೂರಿಗೆ ತಲುಪಿದರು.

ಅಮೆರಿಕಾದಿಂದ ರಾತ್ರಿ 9 ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಸಭಾಧ್ಯಕ್ಷ ಯು ಟಿ ಖಾದರ್ ನೇರಾ ತಮ್ಮ ಗೃಹ ಕಚೇರಿಗೆ ತೆರಳಿ ಕಡತಗಳ ಪರಿಶೀಲನೆ ನಡೆಸಿದರು.

ಬಳಿಕ ಇಂದು ರಾತ್ರಿಯೇ ರಸ್ತೆ ಮೂಲಕ ಮಂಗಳೂರಿಗೆ ಪ್ರಯಾಣಿಸಲಿರುವ ಯುಟಿ ಖಾದರ್ ಆ.15ರಂದು ಉಳ್ಳಾಲ ನಗರ ಸಭಾ ಆಡಳಿತ ವತಿಯಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಮಂಗಳೂರಿನ ಅತೀ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ.










Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News