×
Ad

ಶಾಸಕ ಎನ್.ಎ.ಹಾರಿಸ್ ತಾಯಿ ಸುರಯ್ಯಾ ಮುಹಮ್ಮದ್ ನಿಧನ

Update: 2024-04-02 21:51 IST

ಬೆಂಗಳೂರು: ಶಾಂತಿನಗರ ಕ್ಷೇತ್ರದ ಶಾಸಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹಾರಿಸ್ ಅವರ ತಾಯಿ ಸುರಯ್ಯಾ ಮುಹಮ್ಮದ್(78) ದೀರ್ಘಕಾಲದ ಅನಾರೋಗ್ಯದಿಂದಾಗಿ ಮಂಗಳವಾರ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸುರಯ್ಯಾ ಮುಹಮ್ಮದ್ ಹಲವು ದಿನಗಳಿಂದ ಮಣಿಪಾಲ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇಂದು ರಾತ್ರಿ 10 ಗಂಟೆಗೆ ತರಾವೀಹ್ ನಮಾಝ್ ಬಳಿಕ ಮಸ್ಜಿದೆ ಖಿಝರ್ ನಲ್ಲಿ ಜನಾಝಾ ನಮಾಝ್  ನೆರವೇರಿಸಲಾಯಿತು. ಶಾಂತಿನಗರದ ಖಬರಸ್ತಾನ್ ನಲ್ಲಿ ಮೃತರ ಅಂತ್ಯಕ್ರಿಯೆಯನ್ನು ಕುಟುಂಬ ಸದಸ್ಯರು, ಅಪಾರ ಬಂಧು ಬಳಗದವರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಸುರಯ್ಯಾ ಮುಹಮ್ಮದ್ ಅವರ ಪತಿ ಡಾ.ಎನ್.ಎ.ಮುಹಮ್ಮದ್ ಬೆಂಗಳೂರಿನ ಮಲಬಾರ್ ಮುಸ್ಲಿಮ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ. ಎನ್.ಎ.ಹಾರಿಸ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಪುತ್ರಿಯರಿದ್ದಾರೆ. ಮೊಮ್ಮಗ ಮುಹಮ್ಮದ್ ಹಾರಿಸ್ ನಲಪಾಡ್ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News