×
Ad

ಬಳ್ಳಾರಿ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಕಾಮಗಾರಿಗೆ ಶಾಸಕ ಗಣೇಶ ಶಂಕುಸ್ಥಾಪನೆ

Update: 2025-10-31 20:42 IST

ಬಳ್ಳಾರಿ / ಕಂಪ್ಲಿ : ತಾಲೂಕಿನ ಸಣಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅರಳಿಹಳ್ಳಿ ತಾಂಡ ಬಳಿಯಲ್ಲಿ ಮೀಸಲಿಟ್ಟಿದ್ದ 8 ಎಕರೆ ಪ್ರದೇಶದಲ್ಲಿ ಸುಮಾರು 16 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಡಾ.ನೂರ್ ಹೈಮದ್ ಖಾದ್ರಿ, ಸೈಯದ್ ಷಾ ಕರಿಮುಲ್ಲಾ ಖಾದ್ರಿ ಇವರ ಸಮ್ಮುಖದಲ್ಲಿ ಶಾಸಕ ಜೆ.ಎಎನ್.ಗಣೇಶ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಶಾಸಕ ಜೆ.ಎನ್.ಗಣೇಶ ಮಾತನಾಡಿ, ಕಂಪ್ಲಿಯ ಅರಳಿಹಳ್ಳಿ ತಾಂಡದಲ್ಲಿ ಸುಮಾರು 16 ಕೋಟಿ ರೂ. ವೆಚ್ಚದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಕಾಮಗಾರಿಗೆ ಚಾಲನೆ ದೊರೆತಿದೆ. ಅತಿ ಶೀಘ್ರದಲ್ಲೇ ಓಬಿಸಿ ಹಾಸ್ಟೆಲ್ ಕಾಮಗಾರಿಗೆ ಚಾಲನೆ ನೀಡಲಾಗುವುದು. ಸುಮಾರು 80 ಕ್ಕೂ ಜಿಟಿಟಿಸಿ ಶಾಲೆಯಾಗುತ್ತಿದೆ. ಕುರುಗೋಡು ಭಾಗದಲ್ಲಿ ಕಾರ್ಮಿಕರ ಮೊರಾರ್ಜಿ ದೇಸಾಯಿ, ಗಾಂಧಿತತ್ವ ಶಾಲೆ, ಅಲ್ಪಸಂಖ್ಯಾತರ ಮೊರಾರ್ಜಿ ಶಾಲೆ, ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ. ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡಲಾಗುತ್ತಿದೆ. ಇತಿಹಾಸದಲ್ಲಿ ಕಂಪ್ಲಿ ತಾಲೂಕಿನ ಶೈಕ್ಷಣಿಕ ಮಟ್ಟದ ಅಭಿವೃದ್ಧಿ ನಿರಂತರವಾಗಿ ಆದ್ಯತೆ ನೀಡಲಾಗುತ್ತಿದೆ. ಯುವ ಜನತೆಗೆ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟರೆ ಹೊಸ ಬದಲಾವಣೆ ಸಾಧ್ಯ ಎಂಬುದು ರಾಹುಲ್ ಗಾಂಧಿಯವರ ಕನಸಾಗಿದೆ. ದೇವರ ದಯೆಯಿಂದ ಅವಕಾಶ ಸಿಕ್ಕರೆ ಬದಲಾವಣೆ ಮಾಡಿ ತೋರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯರಾದ ಕೆ.ಎಸ್.ಚಾಂದ್‌ಬಾಷಾ, ಲೊಡ್ಡು ಹೊನ್ನೂರವಲಿ, ವೀರಾಂಜಿನೇಯ, ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಿಸಿ ರಾಜು ತಳವಾರ, ಪ್ರಾಚಾರ್ಯ ಬಸವರಾಜ, ನಿಲಯ ಪಾಲಕ ಮಲ್ಲಪ್ಪ, ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಯು.ಜಹೀರುದ್ದೀನ್, ಮುಖಂಡರಾದ ಪಿ.ಮೂಕಯ್ಯಸ್ವಾಮಿ, ಬಿ.ನಾರಾಯಣಪ್ಪ, ನಾಗರಾಜ ಡೆಕೋರೇಶನ್, ನಾಗೇಶ್ವರರಾವ್, ಹೊಸಕೋಟೆ ಜಗದೀಶ, ಜಾಫರ್, ಅಚ್ಷುತ್‌ನಾಯ್ಡು, ಹನುಮಂತಪ್ಪ, ದೊಡ್ಡಬಸಪ್ಪ, ಕನಕಗಿರಿ ರೇಣುಕಾಗೌಡ, ಸಿದ್ದಪ್ಪ, ನಿರ‍್ಗಂಟಿ ವಿರೇಶ, ರಿಯಾಜ್ ಅಹಮ್ಮದ್, ಯು.ಖಾಜಾ ಹುಸೇನ್, ಆರ್.ಪಿ.ಶಶಿಕುಮಾರ, ರಾಜಾಭಕ್ಷಿ, ವಾಸುಕುಮಾರ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News