ಬಳ್ಳಾರಿ | ಮಹಿಳೆ ಕಾಣೆ : ಪತ್ತೆಗೆ ಮನವಿ
Update: 2025-08-21 18:33 IST
ಬಳ್ಳಾರಿ : ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುರಾರಿಪುರ ಗ್ರಾಮದ ಬಸಮ್ಮ ಎನ್ನುವ 67 ವರ್ಷದ ಮಹಿಳೆಯು ಜು.4 ರಂದು ಸಂಡೂರು ಸರ್ಕಾರಿ ಆಸ್ಪತ್ರೆಗೆ ಹೋಗಿಬರುತ್ತೇನೆ ಎಂದು ಮರಳಿ ಬಾರದೇ ಕಾಣೆಯಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಂಡೂರು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಚಹರೆ ಗುರುತು: ಅಂದಾಜು 5 ಅಡಿ ಎತ್ತರ, ಗೋಧಿಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಬ್ಲೌಸ್ ಮತ್ತು ಕೆಂಪು ಬಣ್ಣದ ಸೀರೆ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಅಥವಾ ಸಂಡೂರು ವೃತ್ತ ಸಿ.ಪಿ.ಐ ದೂ.08395-260100, 9480803036, ಸಂಡೂರು ಪೊಲೀಸ್ ಠಾಣೆ ಮೊ.9480803061, 8548080425ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.