ಬಳ್ಳಾರಿಯ ಎಲ್ಲಾ ಚಿತ್ರಮಂದಿರಗಳಲ್ಲಿ ಒಂದು ವಾರಗಳ ಕಾಲ ಕನ್ನಡ ಚಿತ್ರಗಳ ಪ್ರದರ್ಶನ : ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಎನ್.ಝುಬೇರ್
Update: 2025-10-29 20:09 IST
ಬಳ್ಳಾರಿ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ಎಲ್ಲಾ ಖಾಯಂ, ಅರೆ ಖಾಯಂ, ತಾತ್ಕಾಲಿಕ ಚಿತ್ರಮಂದಿರಗಳಲ್ಲಿ ಮತ್ತು ವಿಡೀಯೋ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ನ.1 ರಿಂದ 7 ರವರೆಗೆ ಒಂದು ವಾರಗಳ ಕಾಲ ಕನ್ನಡ ಚಲನಚಿತ್ರಗಳನ್ನು ಜಿಲ್ಲೆಯ ಎಲ್ಲಾ ಚಲನಚಿತ್ರ ಮಂದಿರಗಳ ಮಾಲಕರು ಪ್ರದರ್ಶಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಎನ್.ಝುಬೇರ್ ಅವರು ತಿಳಿಸಿದ್ದಾರೆ.
ಒಂದು ವೇಳೆ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸದೇ ಇದ್ದಲ್ಲಿ ಚಲನಚಿತ್ರ ಮಂದಿರಗಳ ಪರವಾನಿಗೆಯನ್ನು ನವೀಕರಿಸುವುದಿಲ್ಲ. ಅ.31 ಮತ್ತು ನ.1 ರಂದು ಚಿತ್ರಮಂದಿರಗಳ ಮೇಲೆ ಕಡ್ಡಾಯವಾಗಿ ದೀಪಾಂಲಕಾರ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.