×
Ad

ಬೆಂಗಳೂರು: ಪೈಂಟ್‌ ಮಿಕ್ಸಿಂಗ್‌ ಯಂತ್ರಕ್ಕೆ ಕೂದಲು ಸಿಲುಕಿ ಮಹಿಳೆ ಮೃತ್ಯು

Update: 2023-11-09 11:34 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ನ.9: ಪೈಂಟ್ ಮಿಕ್ಸ್ ಮಾಡುವ ಯಂತ್ರಕ್ಕೆ ಆಕಸ್ಮಿಕವಾಗಿ ಕೂದಲು ಸಿಲುಕಿ ಮಹಿಳೆಯೊಬ್ಬರ ತಲೆ ತುಂಡಾಗಿರುವ ದಾರುಣ ಘಟನೆ ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಮೃತರನ್ನು ರಾಮನಗರ ಮೂಲದ ಸುರೇಶ್ ಎಂಬವರ ಪತ್ನಿ ಶ್ವೇತಾ(34) ಎಂದು ಗುರುತಿಸಲಾಗಿದೆ.

ಶ್ವೇತಾ ನೆಲಗೆದರನಹಳ್ಳಿಯಲ್ಲಿರುವ ಶ್ರೀ ಪೈಂಟ್ಸ್ ಎಂಬ ಪೈಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಪೈಂಟ್ ತಯಾರಿಸಲು ಬಳಸುವ ಕಚ್ಚಾ ವಸ್ತುಗಳನ್ನು ಮಿಕ್ಸ್ ಮಾಡುವ ಯಂತ್ರಕ್ಕೆ ಹಾಕಲಾಗಿತ್ತು. ಪೈಂಟ್ ಮಿಕ್ಸಿಂಗ್ ಆಗಿರುವ ಬಗ್ಗೆ ಪರಿಶೀಲಿಸಲು ಮುಂದಾದಾಗ ಶ್ವೇತಾರ ಜಡೆ ಯಂತ್ರಕ್ಕೆ ಸಿಲುಕಿದೆ ಎನ್ನಲಾಗಿದೆ. ಗ್ರೈಂಡರ್ ತಿರುಗುವ ರಭಸಕ್ಕೆ ಶ್ವೇತಾರ ತಲೆ ತುಂಡಾಗಿದೆ. ಘಟನೆಯ ವೇಳೆ ಸ್ಥಳದಲ್ಲಿ ಯಾರೂ ಇಲ್ಲವಾಗಿದ್ದರಿಂದ ಕೆಲ ಹೊತ್ತಿನ ಬಳಿಕ ಗ್ರೈಂಡರ್ ಬಳಿ ಸಹಕಾರ್ಮಿಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಶ್ವೇತಾ ಪತಿ ಸುರೇಶ್ ನೀಡಿದ ದೂರಿನನ್ವಯ ಶ್ರೀ ಪೆಯಿಂಟ್ಸ್ ಕಾರ್ಖಾನೆ ಮಾಲಕರ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೀಣ್ಯ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಲ್ಲತ್ತಹಳ್ಳಿಯಲ್ಲಿ ಪತಿ ಜೊತೆಗೆ ವಾಸವಿದ್ದ ಶ್ವೇತಾರಿಗೆ ಒಂದು ಮಗುವಿದೆ.ಪತಿ ಸುರೇಶ್ ಗಾರೆ ಕೆಲಸಗಾರರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News