×
Ad

ಸೋಯಾ ಬಣವೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು : ಅಪಾರ ಪ್ರಮಾಣದ ಬೆಳೆ ಹಾನಿ

Update: 2025-10-24 12:44 IST

ಬೀದರ್ : ಸೋಯಾ ಬಣವೆಗೆ  ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಅಪಾರ ಪ್ರಮಾಣದ ಸೋಯಾ ಬೆಳೆಯು ಸುಟ್ಟ ಘಟನೆ ಔರಾದ್ ತಾಲೂಕಿನ ಜೋಜನಾ ಗ್ರಾಮದಲ್ಲಿ ಗುರುವಾರ ರಾತ್ರಿ ಸುಮಾರು 8 ಗಂಟೆಗೆ ನಡೆದಿದೆ.

ಜೋಜನಾ ಗ್ರಾಮದ ರೈತ ಹಣಮಂತ್ ರಾಘೋಳೆ ಅವರು ಲಿಂಗದಳ್ಳಿ (ಕೆ ) ಗ್ರಾಮದ 4 ಎಕರೆ ಭೂಪ್ರದೇಶದಲ್ಲಿ ಸೋಯಾ ಬೆಳೆದಿದ್ದರು. ಆ ಬೆಳೆದ ಸೋಯಾ ಕಟಾವು ಮಾಡಿ ರಾಶಿ ಮಾಡಿ ಕೂಡಿಡಲಾಗಿತ್ತು.  ಈ ಮಧ್ಯೆ ಯಾರೋ ಅಪರಿಚಿತ ಕಿಡಿಗೇಡಿಗಳು ಸೋಯಾ ಬಣವೆಗೆ ಬೆಂಕಿ ಹಚ್ಚಿದ್ದಾರೆ. ಸುಮಾರು 1 ಲಕ್ಷ 50 ಸಾವಿರ ರೂ. ಮೌಲ್ಯದ 30 ಕ್ವಿಂಟಲ್ ಗಿಂತಲೂ ಹೆಚ್ಚು ಫಸಲು ಇರುವ ಬೆಳೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News