ಬೀದರ್ ಜಿಲ್ಲೆಯಲ್ಲಿ 4.46 ಲಕ್ಷ ಎಸ್‌ಐಆರ್ ಅರ್ಜಿ ವಿತರಣೆ; 33,883 ಅರ್ಜಿ ಸ್ವೀಕಾರ
ಸಾಂದರ್ಭಿಕ ಚಿತ್ರ
ಬೀದರ್: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಬೀದರ್ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 4,46,680 ಮತದಾರರ ಗಣತಿ ನಮೂನೆ ಅರ್ಜಿಗಳನ್ನು ವಿತರಿಸಲಾಗಿದ್ದು, ಇದುವರೆಗೆ 33,883 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಬೀದರ್ ಚುನಾವಣಾ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 76,115 ಅರ್ಜಿಗಳನ್ನು ವಿತರಿಸಲಾಗಿದ್ದು, 6,228 ಅರ್ಜಿಗಳು ಸ್ವೀಕೃತಗೊಂಡಿವೆ. ಹುಮನಾಬಾದ್ ಕ್ಷೇತ್ರದಲ್ಲಿ 90,973 ಅರ್ಜಿಗಳ ಪೈಕಿ 4,228 ಅರ್ಜಿಗಳು ಸಲ್ಲಿಕೆಯಾಗಿವೆ.
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 50,641 ಅರ್ಜಿಗಳನ್ನು ವಿತರಿಸಲಾಗಿದ್ದು, ಅತಿ ಹೆಚ್ಚು 13,414 ಅರ್ಜಿಗಳು ಸ್ವೀಕೃತಗೊಂಡಿವೆ.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ 56,263 ಅರ್ಜಿಗಳ ಪೈಕಿ 3,979 ಅರ್ಜಿಗಳು, ಬೀದರ್ ಕ್ಷೇತ್ರದಲ್ಲಿ 83,999 ಅರ್ಜಿಗಳ ಪೈಕಿ 3,365 ಅರ್ಜಿಗಳು ಹಾಗೂ ಔರಾದ್ (ಬಿ) ಕ್ಷೇತ್ರದಲ್ಲಿ 88,689 ಅರ್ಜಿಗಳ ಪೈಕಿ 2,669 ಅರ್ಜಿಗಳು ಸ್ವೀಕೃತಗೊಂಡಿವೆ.
ಜಿಲ್ಲೆಯಲ್ಲಿ ಒಟ್ಟಾರೆ 4,46,680 ಮತದಾರರ ಗಣತಿ ನಮೂನೆ ಅರ್ಜಿಗಳನ್ನು ವಿತರಿಸಿದ್ದು, 33,883 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ತಹಸೀಲ್ದಾರ್ ತಿಳಿಸಿದ್ದು, ಈ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.