×
Ad

ಬಸವಕಲ್ಯಾಣ | ಜೀವನಕ್ಕೆ ದಾರಿ ತೋರುವವನೇ ನಿಜವಾದ ಆದರ್ಶ ಶಿಕ್ಷಕ : ಸಿದ್ಧವೀರಯ್ಯ ರುದ್ನೂರ

ಮಿರಖಲ್‌ನಲ್ಲಿ ಶಿಕ್ಷಕ ರಮೇಶ ಘಾಳೆ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮ

Update: 2026-01-01 19:30 IST

ಬಸವಕಲ್ಯಾಣ : ಸಮಾಜದಲ್ಲಿ ಮಕ್ಕಳು ಹೇಗೆ ಜೀವನ ಸಾಗಿಸಬೇಕು ಎಂಬುದಕ್ಕೆ ದಾರಿ ತೋರಿಸುವ ಶಿಕ್ಷಕರೇ ನಿಜವಾದ ಆದರ್ಶ ಶಿಕ್ಷಕರಾಗುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಹೇಳಿದರು.

ಹುಲಸೂರ ತಾಲ್ಲೂಕಿನ ಮಿರಖಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿಕ್ಷಕ ರಮೇಶ ಘಾಳೆ ಅವರ ಸೇವಾ ನಿವೃತ್ತಿ ಪ್ರಯುಕ್ತ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಪಾಠ ಹಾಗೂ ಆಟಗಳೊಂದಿಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸುವುದು ಅತ್ಯಂತ ಅವಶ್ಯಕವಾಗಿದೆ. ಇಂದು ಗ್ರಾಮದ ಜನರ ಸಹಭಾಗಿತ್ವವನ್ನು ನೋಡಿದರೆ, ರಮೇಶ ಘಾಳೆ ಅವರು ಎಷ್ಟು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಮಕ್ಕಳಿಗೆ ಶೈಕ್ಷಣಿಕ ಜ್ಞಾನಕ್ಕೆ ಜೊತೆಗೆ ಉತ್ತಮ ಮೌಲ್ಯಗಳನ್ನು ಕಲಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಾವಣ್ಣಾ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುವರ್ಣ ಮೇತ್ರೆ, ಎಸ್ಡಿಎಂಸಿ ಅಧ್ಯಕ್ಷೆ ಪೂಜಾ ಮಾಳಿ, ಬಸವಕಲ್ಯಾಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ ಅಕ್ಕಣ, ಶಿಕ್ಷಣ ಸಂಯೋಜಕ ರಾಜಕುಮಾರ ಸಾಲಿ, ಶಿವರಾಜ ಕನಕಟ್ಟೆ, ರವಿಂದ್ರ ಖಂಡಾಳೆ, ಸಿಆರ್ಪಿ ಶಮಾ ಬಿ., ಡಾ. ಧರ್ಮೇಂದ್ರ ಭೋಸ್ಲೆ, ವೆಂಕಟ ಕುಂಬಾರ, ಸಂತೋಷ ಕಾಂಬ್ಳೆ, ಶಂಕರಯ್ಯ ಮಠಪತಿ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶಿವರಾಜ ಮಾಶೆಟ್ಟಿ, ಹುಲಸೂರ ಹಾಗೂ ಬಸವಕಲ್ಯಾಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಹರಿನಾಥ ಪಾಟೀಲ ಮತ್ತು ಲಕ್ಷ್ಮಣ ಹೆಂಬಾಡೆ, ಸರ್ಕಾರಿ ನೌಕರರ ರಾಜ್ಯ ಪರಿಷತ್ ಸದಸ್ಯ ಭೀಮಾಶಂಕರ ಆದೆಪ್ಪ, ವರ್ಷಾ ಪಂಚಾಳ, ರಾಜಮತಿ ಕೊರಾಳೆ, ರೋಹಿದಾಸ್ ಮಾಲೆ, ಶರಣಬಸಪ್ಪ ಬಿರಾದಾರ, ವಿರೇಂದ್ರ ರಡ್ಡಿ, ಕಾಶಿನಾಥ ಹೋಳ್ಕಡೆ ಸೇರಿದಂತೆ ಶಾಲಾ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News