×
Ad

ಭಾಲ್ಕಿ | ಜನ ಸೇವೆಗೆ ಖಂಡ್ರೆ ಪರಿವಾರ ಮುಡಿಪು : ಗುರುಬಸವ ಪಟ್ಟದೇವರು

ಹಿರೇಮಠ ಸಂಸ್ಥಾನದಲ್ಲಿ ಸಂಸದ ಸಾಗರ್ ಖಂಡ್ರೆ ಅವರ ಜನ್ಮ ದಿನಾಚರಣೆ

Update: 2025-12-29 21:20 IST

ಭಾಲ್ಕಿ : ಜಿಲ್ಲೆಯ ಜನರ ಸೇವೆಗೆ ಖಂಡ್ರೆ ಪರಿವಾರ ಮುಡಿಪಾಗಿಟ್ಟಿದೆ ಎಂದು ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದೇವರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಸಂಸದ ಸಾಗರ್ ಖಂಡ್ರೆ ಅವರ 28ನೇ ಜನ್ಮದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶತಾಯಷಿ ಡಾ.ಭೀಮಣ್ಣ ಖಂಡ್ರೆ ಅವರಿಂದ ಪ್ರಾರಂಭಗೊಂಡ ರಾಜಕೀಯ ಸೇವೆ ಇದೀಗ ಅವರ ಮೊಮ್ಮಗ ಸಾಗರ್ ಖಂಡ್ರೆ ಅವರು ಕೂಡ ಜನರ ಆಶೀರ್ವಾದಿಂದ ಸಂಸದರಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಕಾರಾತ್ಮಕ ವಿಚಾರ, ಚಿಂತನೆಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ ಎನ್ನುವುದಕ್ಕೆ ಸಾಗರ ಖಂಡ್ರೆ ಅವರು ಸಾಕ್ಷಿಯಾಗಿದ್ದಾರೆ ಎಂದರು.

ಸಂಸದನಾಗುವುದಕ್ಕಿಂತ ಮುಂಚೆ ಸಾಗರ್ ಖಂಡ್ರೆ ಅವರು ಯಾವದೇ ಫಲಾಪೇಕ್ಷೆ ಇಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿ ವೇತನಕ್ಕಾಗಿ ಹೋರಾಟ, ರಕ್ತದಾನ ಶಿಬಿರದಂತಹ ಅನೇಕ ಸಾಮಾಜಿಕ ಕೆಲಸಗಳಲ್ಲಿ ಕೈಗೊಂಡಿದ್ದರು. ಕೋವಿಡ್ ಸಮಯದಲ್ಲಿ ಜೀವದ ಹಂಗು ತೊರೆದು ಜನರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿದರು. ಇಂತಹ ಜನಪರ, ಜೀವಪರ ಕೆಲಸಗಳು ಸಾಗರ್ ಅವರಿಗೆ ಸಂಸದನಾಗಲು ವರವಾದವು. ಸಂಸದರಾಗಿ ಒಂದುವರೇ ವರ್ಷದಲ್ಲೇ ಜನರ ಪ್ರೀತಿ, ವಿಶ್ವಾಸಗಳಿಸಿದ್ದಾರೆ. ಬಡ ಜನರಿಗೆ ವಸತಿ ಯೋಜನೆಯಡಿ ಪಕ್ಕಾ ಮನೆ, ರೈಲ್ವೆ ಯೋಜನೆ ಅನುಷ್ಠಾನ ಸೇರಿ ಮುಂತಾದ ಅಭಿವೃದ್ಧಿ ಪರ ಕಾರ್ಯಗಳು ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದ ಸಾಗರ ಖಂಡ್ರೆ ಅವರು, ಹಿರೇಮಠ ಸಂಸ್ಥಾನ ಮತ್ತು ನಮ್ಮ ಪರಿವಾರಕ್ಕೂ ಶತಮಾನಗಳಿಂದ ಸಂಬಂಧ ಹೊಂದಿದೆ. ನನ್ನ ರಾಜಕೀಯ ಬೆಳವಣಿಗೆ ಹಿಂದೆ ಡಾ.ಚನ್ನಬಸವ ಪಟ್ಟದೇವರ ಆಶೀರ್ವಾದ, ಡಾ.ಭೀಮಣ್ಣ ಖಂಡ್ರೆ ಅವರ ಪರಿಶ್ರಮ ಅಡಗಿದೆ. ಈ ಇಬ್ಬರು ಒಂದು ನಾಣ್ಯದ ಎರಡು ಮುಖಗಳಾಗಿದ್ದು, ಅವರು ತೋರಿದ ದಾರಿಯಲ್ಲಿ ನಡೆದು ಸಮಾಜ ಸೇವೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹಣಮಂತರಾವ್ ಚೌವ್ಹಾಣ್‌, ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ್ ಹುಣಜೆ ಮದಕಟ್ಟಿ, ರವೀಂದ್ರ ಚಿಡಗುಪ್ಪೆ, ರಾಜಕುಮಾರ್ ಬಿರಾದಾರ್ ಹಾಗೂ ಲೋಕೋಪಯೋಗಿ ಇಲಾಖೆಯ ಎಇಇ ಅಲ್ತಾಫಮಿಯ್ಯ ಸೇರಿದಂತೆ ಹಲವರು ಇದ್ದರು. ನವಲಿಂಗ್ ಪಾಟೀಲ್ ನಿರೂಪಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News