×
Ad

ಬೀದರ್: ಕಾರಿನ ಗಾಜು ಒಡೆದು 2 ಲಕ್ಷ ರೂ. ಕಳ್ಳತನ

Update: 2025-05-31 12:30 IST

ಬೀದರ್ : ಕಾರಿನ ಗಾಜು ಒಡೆದು ಕಳ್ಳರು ಸುಮಾರು 2 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾದ ಘಟನೆ ಶುಕ್ರವಾರ ಭಾಲ್ಕಿ ನಗರದಲ್ಲಿ ನಡೆದಿದೆ.

"ನನ್ನ ಡ್ರೈವರ್ ಎಚ್ ಡಿ ಎಫ್ ಸಿ ಬ್ಯಾಂಕಿನಿಂದ ಹಣ ತೆಗೆದುಕೊಂಡು ಕಾರಿನಲ್ಲಿಟ್ಟು ಐದು ನಿಮಿಷ ಕಚೇರಿಯಲ್ಲಿ ಬಂದಿದ್ದರು. ಅಷ್ಟರಲ್ಲಿ ಕಾರಲ್ಲಿದ್ದ 2 ಲಕ್ಷ ರೂ. ಕಳುವಾಗಿದೆ. ಕಳುವು ಮಾಡಿದವರು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ" ಎಂದು ಹಣ ಕಳೆದುಕೊಂಡಿರುವ ಶಿವು ಲೋಖಂಡೆ ಅವರು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News