ಬೀದರ್ | ಮಾಂಜ್ರಾ ನದಿಯಲ್ಲಿ ಕೊಚ್ಚಿ ಹೋದ ಮೃತ ರೈತನ ಮನೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ : ಪರಿಹಾರ ವಿತರಣೆ
Update: 2025-07-07 17:58 IST
ಬೀದರ್ : ಮಾಂಜ್ರಾ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟ ರೈತನ ಮನೆಗೆ ಇಂದು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಪರಿಹಾರ ವಿತರಣೆ ಮಾಡಿದರು.
ಮೃತನ ಕುಟುಂಬಕ್ಕೆ ಭೇಟಿ ನೀಡಿದ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಕುಟುಂಬಸ್ಥರಿಗೆ ಸರಕಾರದಿಂದ ಅನುಮೋದಿಸಲಾದ 5 ಲಕ್ಷ ರೂ. ಪರಿಹಾರ ಧನದ ಚೆಕ್ ಹಸ್ತಾಂತರಿಸಿದರು.
ಭಾಲ್ಕಿ ತಾಲ್ಲೂಕಿನ ಭಾಟಸಾಂಗವಿ ಗ್ರಾಮದ ರೈತ ನಾಮದೇವ್ ಝಳಕೆ (65) ಅವರು ಜು.3 ರಂದು ಮಾಂಜ್ರಾ ನದಿ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಜು. 5 ರಂದು ಅವರ ಮೃತದೇಹ ಪತ್ತೆಹಚ್ಚಲಾಗಿತ್ತು.