×
Ad

ಬೀದರ್ | ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ಜಿಲ್ಲೆಯ 38,038 ಪ್ರಕರಣಗಳು ಇತ್ಯರ್ಥ : ನ್ಯಾ.ಪ್ರಕಾಶ್ ಅರ್ಜುನ್ ಬನಸೊಡೆ

Update: 2025-09-16 17:16 IST

ಬೀದರ್: ಸೆ.13 ರಂದು ನಡೆದ ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ ಜಿಲ್ಲಾದ್ಯಂತ 38,038 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟು 20.96 ಕೋಟಿ ರೂ. ಪರಿಹಾರ ಕಕ್ಷಿದಾರರಿಗೆ ಒದಗಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಅರ್ಜುನ್ ಬನಸೊಡೆ ತಿಳಿಸಿದ್ದಾರೆ.

ಈ ಅದಾಲತ್‌ನಲ್ಲಿ 9,899 ಬಾಕಿ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಕಕ್ಷಿದಾರರಿಗೆ 14.28 ಕೋಟಿ ರೂ. ಪರಿಹಾರ ವಸೂಲಾತಿ ಒದಗಿಸಲಾಗಿದೆ. ಜೊತೆಗೆ 28,139 ವ್ಯಾಜ್ಯಪೂರ್ವ ಪ್ರಕರಣಗಳು ಬಗೆಹರಿಯುವ ಮೂಲಕ 6.68 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು..

ವೈವಾಹಿಕ ವ್ಯಾಜ್ಯಗಳನ್ನು ಸಂಧಾನದ ಮೂಲಕ ಬಗೆಹರಿಸಿ 9 ಜೋಡಿಗಳನ್ನು ಒಗ್ಗೂಡಿಸಲಾಗಿದೆ. ಅಲ್ಲದೆ, 12 ಹಳೆಯ ಪ್ರಕರಣಗಳು ಅಂತಿಮವಾಗಿ ಇತ್ಯರ್ಥಗೊಂಡಿವೆ ಎಂದು ಹೇಳಿದರು..

ಸೆ.30ರವರೆಗೆ ನಡೆಯುವ “ಮೆಡಿಸಿನ್ ಫಾರ್ ನೇಷನ್ – 90 ದಿನಗಳ ಕ್ಯಾಂಪೈನ್” ಅಡಿ ಬಾಕಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಶೀಘ್ರದಲ್ಲಿ ಬಗೆಹರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಜಗದೀಶ್ ದೊರೆ ಹಾಗೂ ಆಕಾಶ್ ಸಜ್ಜನಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News