×
Ad

ಬೀದರ್ | 8 ಕೆಜಿ 120 ಗ್ರಾಂ ಗಾಂಜಾ ಗಿಡಗಳು ಜಪ್ತಿ : ಆರೋಪಿಯ ಬಂಧನ

Update: 2025-09-16 20:07 IST

ಬೀದರ್, ಸೆ.16: ಔರಾದ್ ತಾಲೂಕಿನ ಕರಂಜಿ (ಬಿ) ಗ್ರಾಮದ ಹೊಲವೊಂದರಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಡ್ರೋಣ್ ಕ್ಯಾಮೆರಾ ಸಹಾಯದಿಂದ ಪತ್ತೆ ಹಚ್ಚಿ, 8 ಕೆಜಿ 120 ಗ್ರಾಂ ತೂಕದ ಗಾಂಜಾ (8.12 ಲಕ್ಷ ರೂ. ಮೌಲ್ಯ) ವಶಪಡಿಸಿಕೊಂಡಿದ್ದು, ಒರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಸೆ.16ರ ಬೆಳಿಗ್ಗೆ ಚಿಂತಾಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ 8,12,000 ರೂ. ಮೌಲ್ಯದ 46 ಗಾಂಜಾ ಗಿಡಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಎಸ್ಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ಪಿಎಸ್ಐ ಆಂಬ್ರಿಶ್ ವಾಘಮೋರೆ, ಡಿಸಿಆರ್‌ಬಿ ಘಟಕ ಹಾಗೂ ಚಿಂತಾಕಿ ಠಾಣೆಯ ಪಿಎಸ್‌ಐ ಚಂದ್ರಶೇಖರ್ ನಿರ್ಣೆ ಅವರ ತಂಡ ಪಾಲ್ಗೊಂಡಿತ್ತು.

ಘಟನೆಯ ಕುರಿತು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News