ಬೀದರ್ | ದಲಿತರ ಭೂಮಿ ದುರ್ಬಳಕೆ ಆರೋಪ : ನ್ಯಾಯಕ್ಕಾಗಿ ಮನವಿ
Update: 2026-01-07 22:46 IST
ಬೀದರ್, ಜ.7: ಭಾಲ್ಕಿ-ನೀಲಂಗಾ ರಸ್ತೆ ವಿಸ್ತರಣೆ ಕಾಮಗಾರಿಗೆ ಹುಲಸೂ ಪಟ್ಟಣದ ದಲಿತ ಸಮುದಾಯಕ್ಕೆ ಮಂಜೂರಾದ ಭೂಮಿಯನ್ನು ಯಾವುದೇ ನೋಟಿಸ್ ನೀಡದೆ ಬಳಸಿಕೊಳ್ಳಲಾಗುತ್ತಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಆರೋಪಿಸಿದೆ.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಹುಲಸೂರ್ ನಗರದ ಇನಾಂ ಭೂಮಿ ಸರ್ವೇ ನಂ.1ರಲ್ಲಿನ 18 ಎಕರೆ 12 ಗುಂಟೆ ಭೂಮಿ ದಲಿತ ಸಮುದಾಯಕ್ಕೆ ಮಂಜೂರು ಮಾಡಲಾಗಿದೆ. ಆದರೆ ಅಲ್ಲಿ ಈಗ ರಸ್ತೆ ವಿಸ್ತರಣೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ದೂರಿದರು.
ಸತ್ಯದೀಪ್ ಹಾವನೂರ್, ರಾಜ್ಯ ಉಪಾಧ್ಯಕ್ಷ ದತ್ತು ಸೂರ್ಯವಂಶಿ, ಜಿಲ್ಲಾಧ್ಯಕ್ಷ ಯೋಹಾನ್ ಡಿಸೋಜಾ ಚಿಲ್ಲರ್ಗಿ, ಬಸವಕಲ್ಯಾಣ ತಾಲೂಕು ಅಧ್ಯಕ್ಷ ಸಂತೋಷ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಗುತ್ತೇದಾರ್ ಉಪಸ್ಥಿತರಿದ್ದರು.