ಬೀದರ್ | ಮೊಬೈಲ್ ಮರಳಿಸಿ ಮಾನವೀಯತೆ ಮೆರೆದ ಆಟೋ ಚಾಲಕ
Update: 2025-06-16 22:37 IST
ಬೀದರ್ : ಪ್ರಯಾಣಿಕರೊಬ್ಬರು ಆಟೋ ರಿಕ್ಷಾದಲ್ಲಿ ಬಿಟ್ಟು ಹೋದ ಮೊಬೈಲ್ ಅನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಆಟೋ ಚಾಲಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.
5 ದಿನದ ಹಿಂದೆ ನನ್ನ ಬದುಕಿನ ಬಂಡಿ ಆಟೋ ರಿಕ್ಷಾದಲ್ಲಿ ನನಗೆ ಫೋನ್ ಒಂದು ಸಿಕ್ಕಿದ್ದು, ನಾನು ಹುಮನಾಬಾದ್ ಪಟ್ಟಣದ ಪೊಲೀಸ್ ಠಾಣೆಗೆ ಹೋಗಿ, ಅಲ್ಲಿನ ಪಿಎಸ್ಐ ಅವರಿಗೆ ಆ ಮೊಬೈಲ್ ಒಪ್ಪಿಸಿದ್ದೇನೆ ಎಂದು ಆಟೋ ಚಾಲಕ ಯುವರಾಜ್ ಐಹೋಳ್ಳಿ ಅವರು ತಿಳಿಸಿದ್ದಾರೆ.